`ರಾಯ'ರ ಮಕ್ಕಳೆಂದರೆ ಗೊಂದಲವೇನೂ ಬೇಡ, ರಾಧಿಕಾ ಪಂಡಿತ್ ಮತ್ತು ಯಶ್ ದಂಪತಿಯ ಮಕ್ಕಳು, ಅಷ್ಟೆ. ಈಗ ಈ ರಾಯರ ಮಕ್ಕಳು ಮೊದಲ ರಕ್ಷಾ ಬಂಧನ ಆಚರಿಸಿರುವುದೇ ವಿಶೇಷ. ಈ ವರ್ಷದ ಹೊಸ ಅಕ್ಕ-ತಮ್ಮ ಜೋಡಿ ರಾಯರ ಮಕ್ಕಳು. ಐರಾ ಮತ್ತು ಮತ್ತವಳ ಪುಟ್ಟ ತಮ್ಮ.
ಐರಾ ಈ ರಾಕಿಹಬ್ಬದ ದಿನ ತಮ್ಮನಿಗೆ ರಾಕಿ ಕಟ್ಟಿ ಸಂಭ್ರಮಿಸಿದರೆ, ರಾಕಿಭಾಯ್ ಯಶ್ ಸೋದರಿ ಅಣ್ಣನಿಗೆ ರಾಕಿ ಕಟ್ಟಿ ಸಂಭ್ರಮಿಸಿದ್ರು. ಮಕ್ಕಳ ರಾಕಿ ಹಬ್ಬದ ಸಂಭ್ರಮದ ನಡುವೆಯೂ ಸ್ವಲ್ಪ ಬೇಸರದಲ್ಲಿದ್ದವರು ಸ್ವತಃ ರಾಧಿಕಾ ಪಂಡಿತ್. ಏಕೆಂದರೆ ಅವರ ಪ್ರೀತಿಯ ಸಹೋದರ ಈಗ ಇರೋದು ಚಿಕಾಗೋದಲ್ಲಿ. ಕೊರೊನಾ ಇರೋ ಕಾರಣ ಬರೋದಕ್ಕೂ ಆಗಿಲ್ಲ. ಮೊದಲ ಬಾರಿಗೆ ರಾಕಿ ಹಬ್ಬದ ದಿನ ಅಣ್ಣನನ್ನು ಮಿಸ್ ಮಾಡಿಕೊಂಡಿದ್ದಾರೆ ರಾಧಿಕಾ ಪಂಡಿತ್.