ರಾಕಿಂಗ್ ಸ್ಟಾರ್ ಯಶ್ ಅವರೀಗ ಎಸ್.ನಾರಾಯಣ್ ತೋಟದಲ್ಲಿ ಮರವಾಗಿದ್ದಾರೆ. ಕನ್‍ಫ್ಯೂಸ್ ಆಗಬೇಡಿ, ನಿಮಗೆ ರಾಕಿಂಗ್ ಸ್ಟಾರ್ ಯಶ್ ತಮ್ಮ ಹಾಗೂ ರಾಧಿಕಾ ಮದುವೆ ಆಹ್ವಾನ ಪತ್ರಿಕೆಯ ಜೊತೆ ಸಂಪಿಗೆ ಮರದ ಗಿಡವನ್ನು ಉಡುಗೊರೆಯಾಗಿ ಕೊಟ್ಟಿದ್ದರು. ಮದುವೆಯ ನಂತರ ಯಶ್ ಕುಟುಂಬದಲ್ಲೀಗ ಎರಡು ಹೊಸ ಕುಡಿಗಳು ಜನ್ಮ ತಳೆದಿದ್ದರೆ, ಇತ್ತ ಎಸ್.ನಾರಾಯಣ್ ಮನೆಯಲ್ಲಿ ಯಶ್ ಕೊಟ್ಟಿದ್ದ ಸಂಪಿಗೆ ಗಿಡ, ಮರವಾಗಿದೆ.
ಎಸ್.ನಾರಾಯಣ್ ತಮ್ಮ ತೋಟದಲ್ಲಿ ಯಶ್ ಕೊಟ್ಟಿದ್ದ ಸಂಪಿಗೆ ಗಿಡವನ್ನು ನಾಟಿ ಮಾಡಿದ್ದರು. ನಾರಾಯಣ್ ಅವರು ತಮಗೆ ಉಡುಗೊರೆಯಾಗಿ ಬರುವ ಗಿಡಗಳನ್ನೆಲ್ಲ ತಮ್ಮ ತೋಟದಲ್ಲಿ ಮರವಾಗಿಸಿದ್ದಾರೆ. ಆದರೆ, ಎಸ್.ನಾರಾಯಣ್ ಕೊಟ್ಟಿದ್ದ ಸಂಪಿಗೆ ಗಿಡ ಈಗ ಮರವಾಗಿದ್ದು, ತೋಟದಲ್ಲಿನ ಜನರ ಪಾಲಿಗೆ ಇದು ಯಶ್ ಮರವೇ ಆಗಿ ಹೋಗಿದೆ. ಅಲ್ಲಿನವರು ಯಶ್ ಮರ ಇದ್ಯಲ್ಲ ಅದರ ಹತ್ರ ಬನ್ನಿ, ಹೋಗಿ ಎನ್ನುತ್ತಾರಂತೆ. ಒಟ್ಟಿನಲ್ಲಿ ಯಶ್ ಕೊಟ್ಟಿದ್ದ ಗಿಡದ ಉಡುಗೊರೆ ಈಗ ಮರವಾಗಿದೆ.