ಆಡಿಯೋ ಮಾರುಕಟ್ಟೆಯಲ್ಲಿ ಹೊಸ ಹೊಸ ದಾಖಲೆಗಳನ್ನು ಬೆನ್ನು ಬೆನ್ನಿಗೆ ಬರೆದವರು ಕ್ರೇಜಿ ಸ್ಟಾರ್ ರವಿಚಂದ್ರನ್. ಈಗ ಅವರ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ್ ಅದೇ ರೀತಿ ದಾಖಲೆ ಬರೆದಿದೆ. ವಿಕ್ರಮ್ ಅಭಿನಯದ ತ್ರಿವಿಕ್ರಮ್ ಚಿತ್ರದ ಆಡಿಯೋ ಹಕ್ಕುಗಳು 50 ಲಕ್ಷಕ್ಕೆ ಸೇಲ್ ಆಗಿದೆ.
ರವಿಚಂದ್ರನ್ ಪುತ್ರನಾದರೂ ತಂದೆಯ ನೆರಳಿನಿಂದ ಹೊರಬಂದು ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ಹಠ ತೊಟ್ಟಿರುವ ವಿಕ್ರಮ್, ತ್ರಿವಿಕ್ರಮ್ ಚಿತ್ರಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ನಿರ್ದೇಶಕ ಸಹನಾ ಮೂರ್ತಿ ಚೆಂದದ ಕಥೆಯೊಂದಿಗೆ ಸಿನಿಮಾ ಮಾಡಿದ್ದಾರೆ. ನಿರ್ಮಾಪಕ ಸೋಮಣ್ಣ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿಯೇ ಬಂಡವಾಳ ಹೂಡಿದ್ದಾರೆ.
ಎ2 ಆಡಿಯೋ ಕಂಪೆನಿ, 50 ಲಕ್ಷಕ್ಕೆ ಆಡಿಯೋ ರೈಟ್ಸ್ ಖರೀದಿಸಿದೆ. ಇತ್ತೀಚೆಗೆ ಆಡಿಯೋಗೆ ಮಾರ್ಕೆಟ್ ಇಲ್ಲ. ಆದರೂ ತ್ರಿವಿಕ್ರಮ್ ದಾಖಲೆ ಬರೆದಿದೆ. ಚಿತ್ರದಲ್ಲಿ 6 ಹಾಡುಗಳಿದ್ದು, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಭರ್ಜರಿ ಚೇತನ್ ಹಾಡುಗಳನ್ನು ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶಕ.