` ಪಾಸಿಟಿವ್ ರಿಪೋರ್ಟ್ ನಂತರ ಸುಮಲತಾ ಮಾಡಿದ ಮನವಿ ಇದು..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumalatha ambareesh requests fans
Sumalatha Ambareesh

ಹಿರಿಯ ನಟಿ, ಸಂಸದೆ ಸುಮಲತಾ ಅವರಿಗೆ ಕೋವಿಡ್ 19 ಪಾಸಿಟಿವ್ ಬಂದಿದೆ. ಗಂಟಲು ನೋವು ಮತ್ತು ತಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಇರುವುದು ಕಂಡು ಬಂದಿದೆ. ನಿರಂತರ ಕೆಲಸಗಳಿದ್ದವು. ಕೋವಿಡ್ ಪೀಡಿತ ಪ್ರದೇಶಗಳಿಗೂ ಭೇಟಿ ಕೊಟ್ಟಿದ್ದ ಕಾರಣ, ಪರೀಕ್ಷೆಗೆ ಒಳಗಾದೆ. ಪಾಸಿಟಿವ್ ಬಂದಿದೆ. ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ ಎಂದು ಸ್ವತಃ ಮಾಹಿತಿ ನೀಡಿದ್ದಾರೆ ಸುಮಲತಾ ಅಂಬರೀಷ್.

ತಮ್ಮ ಸಂಪರ್ಕಕ್ಕೆ ಬಂದಿದ್ದ ಎಲ್ಲರ ವಿವರಗಳನ್ನೂ ವೈದ್ಯರಿಗೆ ನೀಡಿದ್ದಾರೆ ಸುಮಲತಾ. ಕೆಲವರ ಹೆಸರು ಬಿಟ್ಟು ಹೋಗಿರಬಹುದು. ನನ್ನ ಸಂಪರ್ಕಕ್ಕೆ ಬಂದವರಲ್ಲಿ ಯಾರಿಗಾದರೂ ಚೈನೀಸ್ ವೈರಸ್ ಕೊರೊನಾ ಲಕ್ಷಣಗಳಿದ್ದರೆ ತಕ್ಷಣ ಪರೀಕ್ಷೆ ಮಾಡಿಸಿ ಎಂದು ಮನವಿ ಮಾಡಿದ್ದಾರೆ ಸುಮಲತಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery