` ಅಣ್ಣನ ಸಾವು : ಡಿಪ್ರೆಷನ್`ನಿಂದ ಆಸ್ಪತ್ರೆ ಸೇರಿದ ಧ್ರುವ ಸರ್ಜಾ ? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
dhruva sarja hospitalized
Dhruva Sarja

ಚಿರಂಜೀವಿ ಸರ್ಜಾ ಅಕಾಲಿಕ ಮರಣ, ಅವರ ಇಡೀ ಕುಟುಂಬವನ್ನು ಕಣ್ಣೀರ ಸಾಗರದಲ್ಲಿಯೇ ಮುಳುಗಿಸಿಬಿಟ್ಟಿದೆ. ಹೊರಗೆ ನಿಂತು ಮಕ್ಕಳಿಗೆ ಧೈರ್ಯ ಹೇಳಿ, ಸಂಸ್ಕಾರ ಮಾಡಿದ್ದ ತಂದೆಯಾಗಲೀ, ಪತಿಯನ್ನು ಕಳೆದುಕೊಂಡ ಅತ್ತಿಗೆಗೆ ಸಮಾಧಾನ ಮಾಡುವ ಸಾಹಸ ಮಾಡುತ್ತಿದ್ದ ತಮ್ಮ ಧ್ರುವ ಸರ್ಜಾ ಆಗಲೀ ಆ ಸಾವಿನ ಆಘಾತದಿಂದ ಹೊರಬಂದಿಲ್ಲ. ಅದರ ಪರಿಣಾಮ ಕುಟುಂಬದವರೆಲ್ಲ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದು ಈಗ ಡಿಸ್‍ಚಾರ್ಜ್ ಆಗಿದ್ದಾರೆ.

ಧ್ರುವ ಅವರ ತಂದೆ, ತಾಯಿ ಹಾಗೂ ಸ್ವತಃ ಧ್ರುವ ಸರ್ಜಾ ಖಿನ್ನತೆಗೆ ಜಾರಿದ್ದರು. ಸರಿಯಾಗಿ ಊಟ, ತಿಂಡಿಯನ್ನೂ ಸಹ ಮಾಡದೆ ಡಿಪ್ರೆಷನ್‍ಗೆ ಒಳಗಾಗಿದ್ದರು. ಹೀಗಾಗಿ ವೈದ್ಯರ ಸಲಹೆ, ಸೂಚನೆ, ಚಿಕಿತ್ಸೆ, ಮಾರ್ಗದರ್ಶನ ಪಡೆದು ಡಿಸ್‍ಚಾರ್ಜ್ ಆಗಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ. ಕೆಲವೇ ದಿನಗಳಲ್ಲಿ ಮಾಧ್ಯಮಗಳ ಎದುರು ಬಂದು ಮಾತನಾಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ. ಮೊದಲಿನ ಹಾಗೆ ಆಗಲು ನಮಗೂ ಸ್ವಲ್ಪ ಸಮಯ ಬೇಕು. ದಯವಿಟ್ಟು ಯಾರೂ ಮನೆಯ ಬಳಿ ಬರಬೇಡಿ. ನಾನೇ ನಿಮ್ಮ ಮುಂದೆ ಬರುತ್ತೇನೆ. ದಯವಿಟ್ಟು ನಮಗೆ ಒಂದಿಷ್ಟು ಖಾಸಗಿ ಸಮಯ ಕೊಡಿ ಅನ್ನೋದು ಧ್ರುವ ಸರ್ಜಾ ಮತ್ತು ಕುಟುಂಬದವರ ಮನವಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery