` ಕಿಚ್ಚನ ಚಿತ್ರಕ್ಕೆ 6 ಕೋಟಿಯ ಕಾಡು ಸೃಷ್ಟಿ..! - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
forest set being erected for sudeep's phantom
Phantom Movie Image

6 ಕೋಟಿ ಖರ್ಚು ಮಾಡಿದರೆ ಎಷ್ಟು ಎಕರೆ ಪ್ರದೇಶದಲ್ಲಿ ಕಾಡು ಸೃಷ್ಟಿಸಬಹುದು. ನೂರಾರು ಎಕರೆ ಎಂದುಕೊಳ್ಳಬೇಡಿ.. ರಿಯಲ್ ಕಾಡು ಮಾಡೋಕೆ ಅದು ಬೇಕು ನಿಜ, ಆದರೆ ಕಾಡಿನ ಸೆಟ್ ಮಾಡಿದರೆ.. ಹೌದು, ಸುದೀಪ್ ಅವರ ಫ್ಯಾಂಟಮ್ ಚಿತ್ರಕ್ಕಾಗಿ ನಿರ್ಮಾಪಕ ಜ್ಯಾಕ್ ಮಂಜು ಅಂಥಾದ್ದೊಂದು ಅದ್ಧೂರಿ ಸೆಟ್ ಹಾಕಿಸುತ್ತಿದ್ದಾರೆ. ಹೈದರಾಬಾದ್‍ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಅದ್ಧೂರಿ ಕಾಡಿನ ಸೆಟ್ ನಿರ್ಮಾಣವಾಗುತ್ತಿದೆ. ಅದಕ್ಕೆ ತಗುಲುತ್ತಿರುವ ಖರ್ಚು ಸುಮಾರು 6 ಕೋಟಿ.

ಎಲ್ಲಿಯೂ ಕಾಂಪ್ರಮೈಸ್ ಆಗದೆ ಬೃಹತ್ ಕಾಡಿನ ಸೆಟ್ ಹಾಕಿಸುತ್ತಿದ್ದೇವೆ. ನಿರ್ಮಾಪಕರೂ ರಿಸ್ಕ್ ತೆಗೆದುಕೊಳ್ಳುತ್ತಿದ್ದಾರೆ. ಚಿತ್ರವಂತೂ ಅದ್ಭುತವಾಗಿ ಮೂಡಿಬರಲಿದೆ ಎಂದಿದ್ದಾರೆ ಫ್ಯಾಂಟಮ್ ನಿರ್ದೇಶಕ ಅನೂಪ್ ಭಂಡಾರಿ.

ಸುದೀಪ್ ಅವರ ಒಂದೊಂದು ಲುಕ್ಕಿಗೂ ಒಂದೊಂದು ಮ್ಯಾನರಿಸಂ ಹಾಗೂ ಒಂದೊಂದು ಸೆಟ್ ಇರಲಿದೆ. ಇದು ನನ್ನ ಕೆರಿಯರ್‍ನಲ್ಲೇ ದೊಡ್ಡ ಲೆವೆಲ್‍ನ ಸಿನಿಮಾ ಆಗಲಿದೆ ಎಂದಿದ್ದಾರೆ ಜಾಕ್ ಮಂಜು.

ಕಾಡಿನ ಸೆಟ್ ಹಾಕಲು ಸುಮಾರು 150 ಜನ ಕೆಲಸಗಾರರು ಸತತ 15 ದಿನದಿಂದ ಕೆಲಸ ಮಾಡುತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery