` ಅಂಬಿ-ವಿಷ್ಣು ಸ್ನೇಹವನ್ನು ಅಪಮಾನಿಸಬೇಡಿ - ಸುಮಲತಾ ಅಂಬರೀಷ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sumalatha ambareesh requests fans
Sumalatha Ambareesh

ಅಂಬರೀಷ್ ಮತ್ತು ವಿಷ್ಣುವರ್ಧನ್ ಎಂತಹ ಸ್ನೇಹಿತರು ಅನ್ನೋದು ಗೊತ್ತಿಲ್ಲದ ವಿಚಾರವೇನಲ್ಲ. ಆದರೆ ಅಂಬರೀಷ್ ಸ್ಮಾರಕ ನಿರ್ಮಾಣಕ್ಕೆ 5 ಕೋಟಿ ರೂ. ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಸುಮಲತಾ ಹೇಳಿದ ತಕ್ಷಣ ಇನ್ನೊಂದು ಕಡೆಯಿಂದ ವಿವಾದವೂ ಹುಟ್ಟಿಕೊಳ್ತು. ಮೊದಲು ವಿಷ್ಣುವರ್ಧನ್ ಸ್ಮಾರಕ ಆಗಲಿ, ಆಮೇಲೆ ಅಂಬಿ ಸ್ಮಾರಕ ಎಂದು ಕೆಲವರು ಹುಯಿಲೆಬ್ಬಿಸಿದರು. ಇದಕ್ಕೆ ಸುಮಲತಾ ಪ್ರತಿಕ್ರಿಯೆ ನೀಡಿದ್ದಾರೆ.

`ಅಂಬಿ ಮತ್ತು ವಿಷ್ಣು ಅವರ ಸ್ನೇಹ ಎಂಥಧ್ದು ಎಂಬುದು ಎಲ್ಲರಿಗೂ ಗೊತ್ತು. ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲಿ ವಿಷ್ಣು ಸ್ಮಾರಕದ ಕೆಲಸ ಶುರುವಾಗಿದೆ. ಒಂದು ವರ್ಷದಿಂದ ಸ್ಮಾರಕದ ಕೆಲಸ ನಡೆಯುತ್ತಿದೆ. ರಾಜ್ಯ ಸರ್ಕಾರ ಘೋಷಿಸಿದ್ದ 10 ಕೋಟಿಯಲ್ಲಿ 5 ಕೋಟಿ ಬಿಡುಗಡೆಯೂ ಆಗಿದೆ. ಅನಗತ್ಯ ಮಾತುಗಳಿಂದ ಅವರಿಬ್ಬರ ಸ್ನೇಹಕ್ಕೆ ಮಸಿ ಬಳಿಯುವುದು ಬೇಡ ಎಂದು ಮನವಿ ಮಾಡಿದ್ದಾರೆ ಸುಮಲತಾ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery