` ಸಿಂಪಲ್ ಸುನಿ ಗಣೇಶ್ 3ನೇ ಬಾರಿಗೆ ಮತ್ತೊಮ್ಮೆ.. - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
simple suni ganesh's magic once again
Simple Suni, Ganesh, The Story Of Rayagada

ಚಮಕ್ ಚಿತ್ರದ ಯಶಸ್ಸಿನ ನಂತರ ಸಿಂಪಲ್ ಸುನಿ ಮತ್ತು ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಚಿತ್ರದಲ್ಲಿ ಮತ್ತೆ ಒಂದಾಗಿದ್ದಾರೆ. ಆ ಚಿತ್ರ ಪ್ರೊಡಕ್ಷನ್ ಹಂತದಲ್ಲಿದೆ. ಹೀಗಿರುವಾಗಲೇ ಇದೇ ಜೋಡಿ 3ನೇ ಬಾರಿಗೆ ಜನುಮದ ಜೋಡಿಯಾಗುವ ಸೂಚನೆ ಕೊಟ್ಟಿದೆ.

ಯೆಸ್, ಸುನಿ ಮತ್ತು ಗಣೇಶ್ `ದ ಸ್ಟೋರಿ ಆಫ್ ರಾಯಗಢ' ಅನ್ನೋ ಚಿತ್ರ ಮಾಡೋಕೆ ರೆಡಿಯಾಗಿದ್ದಾರೆ. ಗಣೇಶ್ ಹುಟ್ಟುಹಬ್ಬಕ್ಕಾಗಿ ಚಿತ್ರದ ಫಸ್ಟ್ ಲುಕ್ ಕೂಡಾ ಹೊರಬಿದ್ದಿದೆ.

ಚಿತ್ರ ಓಕೆ ಆಗಿರುವುದು ನಿಜ. ಕಥೆ ಡಾರ್ಕ್ ಕಾಮಿಡಿ ಸಿನಿಮಾ. ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತೇವೆ ಎಂದಿರುವ ಸುನಿ ಚಿತ್ರವನ್ನು ಈಗಲೇ ಕೈಗೆತ್ತಿಕೊಳ್ಳೋದಿಲ್ಲ. ಅವತಾರ ಪುರುಷ ಮತ್ತು ಸಖತ್ ಎರಡೂ ಚಿತ್ರಗಳು ಮುಗಿಯಬೇಕು. ಅದಾದ ನಂತರ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಬ್ಯಾನರಿನಲ್ಲೇ ಮತ್ತೊಂದು ಚಿತ್ರಕ್ಕೆ ಕಮಿಟ್ ಆಗಿದ್ದೇನೆ. ಅತ್ತ ಗಣೇಶ್ ಕೂಡಾ ಬೇರೆ ಪ್ರಾಜೆಕ್ಟ್‍ಗಳಲ್ಲಿ ಬ್ಯುಸಿಯಿದ್ದಾರೆ. ಹೀಗಾಗಿ ಈ ಚಿತ್ರ ಸ್ವಲ್ಪ ನಿಧಾನವಾಗಿ ಸೆಟ್ಟೇರಲಿದೆ ಎಂದಿದ್ದಾರೆ ಸಿಂಪಲ್ ಸುನಿ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery