` ರಾಜಣ್ಣನ ಗುರುರಾಯರ ಚಿತ್ರ ಬಣ್ಣ ಬಣ್ಣದಲ್ಲಿ ಬರಲಿದೆ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
mantralaya mahatme to release in color
Mantralaya Mahatme

ಹಳೆಯ ಬ್ಲಾಕ್ & ವೈಟ್ ಚಿತ್ರಗಳನ್ನು ಕಲರ್ ಮಾಡುವುದು ಈಗ ಹೊಸದೇನಲ್ಲ. ಚಿತ್ರಕ್ಕೆ ಕ್ಲಾಸಿಕ್ ಟಚ್ ಇದ್ದು, ಜನ ಈಗಲೂ ನೋಡುತ್ತಾರೆ ಎಂದು ಅನಿಸಿದರೆ ಮಾತ್ರವೇ ಅಂತಹ ಚಿತ್ರಗಳಿಗೆ ಬಣ್ಣ ಬರುತ್ತೆ. ಕನ್ನಡದಲ್ಲಿ ಅಂತಾದ್ದೊಂದು ಶಕ್ತಿ ಇರುವುದು ಡಾ.ರಾಜ್ ಚಿತ್ರಗಳಿಗೆ ಮಾತ್ರ. ಹೀಗಾಗಿಯೇ ಅವರ ಹಲವು ಚಿತ್ರಗಳು ಬಣ್ಣ ತುಂಬಿಕೊಂಡು ಬಂದಿವೆ. ಈಗ ಇನ್ನೊಂದು ಚಿತ್ರ ಮಂತ್ರಾಲಯ ಮಹಾತ್ಮೆಯ ಸರದಿ.

ಮಂತ್ರಾಲಯ ಮಹಾತ್ಮೆ ಚಿತ್ರದಲ್ಲಿ ಡಾ.ರಾಜ್ ಕುಮಾರ್ ಗುರು ರಾಘವೇಂದ್ರ ಸ್ವಾಮಿಯ ಪಾತ್ರದಲ್ಲಿ ನಟಿಸಿದ್ದಾರೆ. ಉದಯ್ ಕುಮಾರ್, ಜಯಂತಿ, ಕಲ್ಪನಾ ಮೊದಲಾದವರು ನಟಿಸಿರುವ ಚಿತ್ರವನ್ನು ನಿರ್ದೇಶಿಸಿದ್ದವರು ಟಿವಿ ಸಿಂಗ್ ಠಾಕೂರ್ ನಿರ್ದೇಶಿಸಿದ್ದರು. 1966ರಲ್ಲಿ ರಿಲೀಸ್ ಆಗಿದ್ದ ಚಿತ್ರವನ್ನು ಈಗ ಮತ್ತೆ ರಿ-ರಿಲೀಸ್ ಮಾಡಲು ಮುಂದಾಗಿದೆ.

ಕಸ್ತೂರಿ ನಿವಾಸ ಚಿತ್ರಕ್ಕೆ ಬಣ್ಣ ತುಂಬಿದ್ದ ತಂಡವೇ ಮಂತ್ರಾಲಯ ಮಹಾತ್ಮೆ ಚಿತ್ರವನ್ನು ಕಲರ್ ಫುಲ್ ಮಾಡಿದೆ. ಲಾಕ್ ಡೌನ್ ಮುಗಿದ ನಂತರ ಮಂತ್ರಾಲಯ ಮಹಾತ್ಮೆ ರಿಲೀಸ್ ಆಗಲಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery