ಓಂ ಆಯ್ತು.. ಓಂಕಾರವೂ ಆಯ್ತು.. ಈಗ ಓಂ ಪ್ರೇಮ.. ಹೌದು, ಓಂ ಪ್ರೇಮ ಹೆಸರಿನ ಚಿತ್ರವೊಂದು ಸೆಟ್ಟೇರುತ್ತಿದೆ. ಚಿತ್ರಕ್ಕೆ ನಾಯಕಿ ಹರ್ಷಿಕಾ ಪೂಣಚ್ಚ. ಕ್ವಾಟ್ಲೆ ಚಿತ್ರದಿಂದ ಗುರುತಿಸಿಕೊಂಡಿದ್ದ ಪಾರ್ಥ ಚಿತ್ರದ ಹೀರೋ. ಅಡವಿಭಾವಿ ಶರಣ್ ಎಂಬುವವರು ನಿರ್ದೇಶಿಸುತ್ತಿರುವ ಚಿತ್ರ ಈಗಾಗಲೇ ಶೇ.30ರಷ್ಟು ಚಿತ್ರೀಕರಣ ಮುಗಿಸಿದೆ.
ಮುಂದಿನ ಶೆಡ್ಯೂಲ್‍ನಲ್ಲಿ ಹರ್ಷಿಕಾ ಪೂಣಚ್ಚ, ಟೀಂ ಸೇರಿಕೊಳ್ಳಲಿದ್ದಾರೆ. ಇದು ಮಹಿಳಾ ಪ್ರಧಾನ ಚಿತ್ರ ಎಂದಷ್ಟೇ ಮಾಹಿತಿ ನೀಡಿದೆ ಚಿತ್ರತಂಡ. ಗೌಸ್‍ಪೀರ್ ಸಂಭಾಷಣೆ ಬರೆದಿರುವ ಚಿತ್ರಕ್ಕೆ ಜೆಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ.