ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೆ ಈಗ ಫುಲ್ ಡಿಮ್ಯಾಂಡ್. ಕಥೆ ಮತ್ತು ಚಿತ್ರಕಥೆಯ ಮೇಲೆ ನೀಲ್ ಅವರಿಗೆ ಇರುವ ಹಿಡಿತ, ಹಲವರು ಅವರನ್ನು ಸಂಪರ್ಕಿಸುವಂತೆ ಮಾಡ್ತಿದೆ. ಈಗ ಸೆಟ್ಟೇರಿರುವ ಮದಗಜ ಚಿತ್ರವನ್ನೂ ಓವರ್ ಲುಕ್ ಮಾಡಿದ್ದರು ಪ್ರಶಾಂತ್ ನೀಲ್. ಈಗ ಮತ್ತೊಂದು ಚಿತ್ರ. ರೌಡಿ ಫೆಲೋ.
ಕರ್ವ ಚಿತ್ರದ ಮೂಲಕ ಗಮನ ಸೆಳೆದಿದ್ದ ಆರ್‍ಜೆ ರೋಹಿತ್, ಈ ಚಿತ್ರದ ನಾಯಕ, ನಿರ್ದೇಶಕ ಮತ್ತು ನಿರ್ಮಾಪಕ. ಆರ್‍ಜೆ ರೋಹಿತ್ ಬೆಳಕಿಗೆ ಬಂದಿದ್ದು ಬಾಂಬೆ ಮಿಠಾಯಿ ಚಿತ್ರದಿಂದ. ಅದಾದ ಮೇಲೆ ಕರ್ವ, ತ್ರಯಂಬಕಂ, ಬಕಾಸುರ ಚಿತ್ರಗಳನ್ನು ಮಾಡಿದ್ದರು ಆರ್‍ಜೆ ರೋಹಿತ್.
ಪ್ರತಿಯೊಬ್ಬರಲ್ಲೂ ತಾನೊಬ್ಬ ಹೀರೋ, ರೌಡಿ ಅನ್ನೋ ಮನಸ್ಥಿತಿ ಇರುತ್ತೆ. ಹೀಗಾಗಿಯೇ ನಾವು ರಸ್ತೆಯಲ್ಲಿ ಯಾರಿಗಾದರೂ ಡಿಕ್ಕಿ ಹೊಡೆದರೆ, ನಮ್ಮದೇ ತಪ್ಪಿದ್ದರೂ ಸಾರಿ ಕೇಳಲ್ಲ. ಜಗಳಕ್ಕೆ ಹೋಗುತ್ತೇವೆ. ಅಂತಹ ಮನಸ್ಥಿತಿ ನಮ್ಮ ಸಿನಿಮಾ ಹೀರೋಗೂ ಇರುತ್ತೆ. ಅದೇ ಚಿತ್ರದ ಕಥೆ ಎನ್ನುತ್ತಾರೆ ರೋಹಿತ್.
ಬಕಾಸುರ ಚಿತ್ರದ ನಂತರ ಪ್ರಶಾಂತ್ ನೀಲ್ ಅವರೇ ಮುಂದಿನ ಕಥೆಯನ್ನು ನಾನೇ ಓಕೆ ಮಾಡ್ತೇನೆ. ಅದನ್ನೇ ನೀನು ಸಿನಿಮಾ ಮಾಡು ಎಂದಿದ್ದರಂತೆ. ಅದರಂತೆಯೇ ರೋಹಿತ್ ನಾಲ್ಕೈದು ಸ್ಕ್ರಿಪ್ಟ್‍ಗಳನ್ನು ಪ್ರಶಾಂತ್ ನೀಲ್ ಅವರಿಗೆ ಕಳಿಸಿಕೊಟ್ಟಿದ್ದರು. ಅಷ್ಟೂ ಸ್ಕ್ರಿಪ್ಟುಗಳಲ್ಲಿ ನೀಲ್ ಓಕೆ ಮಾಡಿದ್ದು ರೌಡಿ ಫೆಲೋ ಕಥೆಯನ್ನ.
ಚಿತ್ರದಲ್ಲ ಸನ್ ಆಫ್ ಬಂಗಾರದ ಮನುಷ್ಯ ಚಿತ್ರದಲ್ಲಿ ನಟಿಸಿದ್ದ ವಿದ್ಯಾ ಪ್ರದೀಪ್ ನಾಯಕಿಯಾಗಿದ್ದಾರೆ. ಊರ್ವಶಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಶೇ.70ರಷ್ಟು ಶೂಟಿಂಗ್ ಮುಗಿಸಿದೆ ಚಿತ್ರತಂಡ. ದಿಯಾ, 6-5=2, ಕರ್ವ ಚಿತ್ರಗಳ ಖ್ಯಾತಿಯ ಕೃಷ್ಣ ಚೈತನ್ಯ ಚಿತ್ರದ ನಿರ್ಮಾಪಕರು.