` ಶ್ರೇಯಸ್ ಮಂಜು ಜೊತೆ ನಾಗಶೇಖರ್ ಕ್ಯೂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shreyas manju's next with nagashekar
Nagashekar, Shreyas K Manju

ಅಮರ್ ಚಿತ್ರದ ನಂತರ ತಮಿಳಿಗೆ ಹೋಗಿ ಅಲ್ಲೊಂದು ಸಿನಿಮಾ ಮುಗಿಸಿ ಬಂದಿರುವ ನಿರ್ದೇಶಕ ನಾಗಶೇಖರ್ ಈಗ ಫುಲ್ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಡಾರ್ಲಿಂಗ್ ಕೃಷ್ಣ ಜೊತೆ ಶ್ರೀಕೃಷ್ಣ@ಜಿಮೇಯ್ಲ್ ಸಿನಿಮಾ ಘೋಷಿಸಿದ್ದ ನಾಗಶೇಖರ್, ಈಗ ಮುಂದಿನ ಚಿತ್ರವನ್ನೂ ಘೋಷಿಸಿದ್ದಾರೆ.

ಪಡ್ಡೆಹುಲಿ ಚಿತ್ರದ ಮೂಲಕ ಭರವಸೆ ಮೂಡಿಸಿರುವ ನಟ ಶ್ರೇಯಸ್ ಮಂಜು, ಹೊಸ ಚಿತ್ರಕ್ಕೆ ಹೀರೋ. ಚಿತ್ರದ ಟೈಟಲ್ ಕ್ಯೂ. ಟ್ಯಾಗ್‍ಲೈನ್ ಏನ್ ಗೊತ್ತಾ.. ಎ ಲವ್ ಸ್ಟೋರಿ ಆಫ್ ಎ ಕ್ವೀನ್. ಶ್ರೇಯಸ್ ಬೈಕ್ ಓಡಿಸುತ್ತಿರುವ ಫೋಟೋವೊಂದರನ್ನು ಶೇರ್ ಮಾಡಿರುವ ನಾಗಶೇಖರ್, ಇದನ್ನು ಸಂದೇಶ್ ಕಂಬೈನ್ಸ್‍ಗಾಗಿ ನಿರ್ದೇಶನ ಮಾಡೋದಾಗಿ ಹೇಳಿದ್ದಾರೆ.