ದುನಿಯಾ ವಿಜಯ್, ಕೆ.ಪಿ.ಶ್ರೀಕಾಂತ್ ಕಾಂಬಿನೇಷನ್‍ನ ಸಿನಿಮಾ ಸಲಗ. ದುನಿಯಾ ವಿಜಯ್ ನಿರ್ದೇಶನದ ಚೊಚ್ಚಲ ಚಿತ್ರ, ಚಿತ್ರೀಕರಣವನ್ನೆಲ್ಲ ಮುಗಿಸಿ ಪೋಸ್ಟ್ ಪ್ರೊಡಕ್ಷನ್‍ನಲ್ಲಿತ್ತು. ಅದಕ್ಕೆ ಬ್ರೇಕ್ ಹಾಕಿದ್ದ ಕೊರೊನಾ ಲಾಕ್ ಡೌನ್, ಸಡಿಲಿಕೆಯಾಗಿದ್ದೇ ತಡ, ಕೆಲಸ ಶುರು ಮಾಡಿದ್ದಾರೆ ವಿಜಿ.
ಭೂಗತ ಲೋಕದ ಕಥಾ ಹಂದರವಿರುವ ಚಿತ್ರದಲ್ಲಿ ಕೆಲವೊಂದು ಕಡೆ ಲೋಪದೋಷಗಳಿವೆ ಎನ್ನಿಸಿ ನಿರ್ದೇಶಕ ವಿಜಯ್ ಮತ್ತು ಸಂಗೀತ ನಿರ್ದೇಶಕ ಚರಣ್‍ರಾಜ್ ಮತ್ತೊಮ್ಮೆ ರೀ-ರೆಕಾರ್ಡಿಂಗ್ ಮಾಡುತ್ತಿದ್ದಾರೆ.
ದುನಿಯಾ ವಿಜಯ್ ಎದುರು ಡಾಲಿ ಧನಂಜಯ್ ಪ್ರತಿ ನಾಯಕರಾಗಿದ್ದರೆ, ಸಂಜನಾ ಆನಂದ್ ನಾಯಕಿಯಾಗಿದ್ದಾರೆ.