` ಜಗ್ಗೇಶ್ ಕೇಳಿದ್ದದ್ದು 50 ಸಾವಿರ.. ಅಂಬಿ ಕೊಡಿಸಿದ್ದು 75 ಸಾವಿರ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jaggesh remembers ambi's helping nature
Ambareesh, Jaggesh

ಅಂಬರೀಷ್ ತಮ್ಮ ವೃತ್ತಿ ಜೀವನದಲ್ಲಿ ಹಲವರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿದ್ದಾರೆ. ಜಗ್ಗೇಶ್ ಕೂಡಾ ಅದಕ್ಕೆ ಹೊರತಲ್ಲ. ಜಗ್ಗೇಶ್ ಪೋಷಕ ನಟರಾಗಿದ್ದಾಗ ಅವರಿಗೆ ದೊಡ್ಡ ಬ್ರೇಕ್ ಕೊಟ್ಟ ಚಿತ್ರ ರೌಡಿ & ಎಂಎಲ್ಎ. ಆ ಚಿತ್ರದಲ್ಲಿ ಜಗ್ಗೇಶ್ ತಮ್ಮ ಪಾತ್ರಕ್ಕೆ 50 ಸಾವಿರ ಸಂಭಾವನೆ ಕೇಳಿದ್ದರಂತೆ. ಚಿತ್ರದ ಮ್ಯಾನೇಜರ್, 50 ಸಾವಿರ ಕೊಡೋಕಾಗಲ್ಲ, ಬೇರೆಯವರನ್ನ ಹಾಕಿಕೊಳ್ತೇನೆ ಎಂದಿದ್ದರಂತೆ. ಅದು ಅಂಬಿಗೆ ಗೊತ್ತಾಗಿ, ಅವರದ್ದೇ ಸ್ಟೈಲಲ್ಲಿ ಬುದ್ದಿ ಹೇಳಿ ಆ ಪಾತ್ರಕ್ಕೆ ಅವನೇ ಸೂಕ್ತ ಎಂದು ಹೇಳಿ, ಜಗ್ಗೇಶ್ ಅವರನ್ನೇ ಬುಕ್ ಮಾಡಿಸಿದ್ರಂತೆ. ಸಂಭಾವನೆ 50 ಸಾವಿರ ಅಲ್ಲ, 75 ಸಾವಿರ.

ಆ ಘಟನೆ ನೆನಪಿಸಿಕೊಂಡು ಅಂಬಿಗೆ ಧನ್ಯವಾದ ಅರ್ಪಿಸಿದ್ದಾರೆ ಜಗ್ಗೇಶ್. ಅಷ್ಟೇ ಅಲ್ಲ, ಸಂದೇಶ್ ನಾಗರಾಜ್ ಮತ್ತು ಅಂಬಿ ಮಧ್ಯರಾತ್ರಿ 2 ಗಂಟೆಯಲ್ಲಿ ಊಟ ಮಾಡುತ್ತಿದ್ದಾಗ ಐ ವಾಂಟ್ ಯೂ, ಬಾಗಿಲು ತೆಗೀರಿ ಎಂದು ಹೆಣ್ಣು ಧ್ವನಿಯಲ್ಲಿ ಕೂಗಿದ್ದರಂತೆ ಜಗ್ಗೇಶ್. ಅದುರಿಬಿದ್ದು ಹೊರಗೆ ಬಂದು ಹೊಡೆಯಲು ಬಂದಾಗ ಕೂಗಿದ್ದು ಚೆಲುವೆ ಅಲ್ಲ, ಜಗ್ಗೇಶ್ ಎಂದು ಗೊತ್ತಾಗಿ ನಕ್ಕೂ ನಕ್ಕೂ ಸುಸ್ತಾಗಿದ್ದರಂತೆ ಅಂಬಿ ಮತ್ತು ಸಂದೇಶ್ ನಾಗರಾಜ್.

ಅವರು ಸಾಯುವ ಮುನ್ನ3 ತಿಂಗಳ ಮೊದಲು ಅವರ ಜೊತೆ ಊಟ ಮಾಡಿದ್ದನ್ನು ನೆನಪಿಸಿಕೊಂಡು ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ ಜಗ್ಗೇಶ್. ಅಂದಹಾಗೆ ಜಗ್ಗೇಶ್ ಹೀರೋ ಆಗಿದ್ದ ಭಂಡ ನನ್ನ ಗಂಡ ಚಿತ್ರದಲ್ಲಿ ಅಂಬಿ ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ಜಗ್ಗೇಶ್ ವ್ಯಕ್ತಿತ್ವ ಬದಲಿಸುವ ಪಾತ್ರದಲ್ಲಿ ನಟಿಸಿದ್ದರು ಅಂಬಿ. ಆ ಚಿತ್ರ ಜಗ್ಗೇಶ್ ವೃತ್ತಿ ಬದುಕನ್ನೇ ಬದಲಿಸಿದ್ದು ಈಗ  ಇತಿಹಾಸ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery