` ಸಿನಿಮಾ, ಶೂಟಿಂಗ್ ಜೂನ್ 1ಕ್ಕೂ ಶುರುವಾಗಲ್ಲ..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
film shootings will not resume from June 1st
Film Shootings will not resume from june 1st

ಜೂನ್ 1ರಿಂದ ಸಿನಿಮಾಗಳ ಚಿತ್ರೀಕರಣಕ್ಕೆ ಅನುಮತಿ ಸಿಗಬಹುದು ಮತ್ತು ಥಿಯೇಟರು, ಮಾಲ್‍ಗಳೂ ಓಪನ್ ಆಗಿ ಚಿತ್ರರಂಗ ಮತ್ತೆ ಕೆಲಸ ಶುರು ಮಾಡಬಹುದು ಎಂಬ ನಿರೀಕ್ಷೆಗಳಿಗೆ ಸೂಕ್ತ ಸ್ಪಂದನೆ ಸಿಗುವಂತೆ ಕಾಣುತ್ತಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪರನ್ನು ಭೇಟಿ ಮಾಡಿದ್ದ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿಗಳಿಗೆ ಸಿಎಂ ಕಡೆಯಿಂದ ಸಿಕ್ಕಿರುವುದು ಸಾಂತ್ವನದ ಮಾತುಗಳು ಮಾತ್ರ.

ಚಿತ್ರೀಕರಣಕ್ಕೆ ಅನುಮತಿ ಕೊಡಿ, ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡಿ ಎಂಬ ಮನವಿಯನ್ನು ಸ್ವೀಕರಿಸಿರುವ ಯಡಿಯೂರಪ್ಪ, ನರೇಂದ್ರ ಮೋದಿಯವರತ್ತ ಕೈತೋರಿಸಿದ್ದಾರೆ. ಮೂಲಗಳ ಪ್ರಕಾರ ಜೂನ್ 15ರ ನಂತರ ಸಿನಿಮಾ ಚಿತ್ರೀಕರಣ, ಸಿನಿಮಾ ಶೋಗಳು ಶುರುವಾಗಬಹುದು.

ಪ್ರದರ್ಶಕರ ಸಂಘದ ಅಧ್ಯಕ್ಷ ಚಂದ್ರಶೇಖರ್ ಪ್ರಕಾರ ಜೂನ್ 1ರಿಂದ ಸಿಇನಿಮಾಗಳ ಒಳಾಂಗಣ ಚಿತ್ರೀಕರಣಕ್ಕೆ ಅನುಮತಿ ಸಿಗಬಹುದು. ಜೂನ್ 15ರಿಂದ ಸಂಪೂರ್ಣ ಸ್ವಾತಂತ್ರ್ಯ ಸಿಗಬಹುದು. ಓಕೆ ಎಂದರೆ ಈ ಕ್ಷಣವೇ ಸಿನಿಮಾ ಪ್ರದರ್ಶನಕ್ಕೆ ನಾವು ರೆಡಿ ಎಂದಿದ್ದಾರೆ ಚಂದ್ರಶೇಖರ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery