ಮೈನಾ ನಾಗಶೇಖರ್ ಮತ್ತು ಲವ್ ಮಾಕ್‍ಟೇಲ್ ಕೃಷ್ಣ ಜೊತೆಯಾಗಿದ್ದಾರೆ ಅನ್ನೋ ಸ್ಟೋರಿಯ ಅಪ್‍ಡೇಟ್ ನ್ಯೂಸ್ ಇದು. ನಾಗಶೇಖರ್ ಹೊಸ ಚಿತ್ರದ ತಾರಾಗಣದ ಆಯ್ಕೆ ನಡೆಯುತ್ತಿದೆ. ನಾಗಶೇಖರ್ ಪ್ರಕಾರ ಅವರ ಕಥೆಯ ಪಾತ್ರಕ್ಕೆ ಸೂಟಬಲ್ ಅನಿಸಿರೋದು ಸ್ವೀಟಿ ರಾಧಿಕಾ ಕುಮಾರಸ್ವಾಮಿ. ಒನ್ ಲೈನ್ ಕಥೆ ಕೇಳಿದ್ದಾರೆ. ಒಂದು ಸುತ್ತಿನ ಮಾತುಕತೆ ನಡೆದಿದೆಯಾದರೂ ರಾಧಿಕಾ ಇನ್ನೂ ಯೆಸ್ ಎಂದಿಲ್ಲ.
ಉಳಿದಂತೆ ಪ್ರಮುಖ ಪಾತ್ರಕ್ಕೆ ದತ್ತಣ್ಣ ಸೆಲೆಕ್ಟ್ ಆಗಿದ್ದರೆ, ಸುಹಾಸಿನಿ, ಅರುಣ್ ಸಾಗರ್, ರಂಗಾಯಣ ರಘು ಉಳಿದ ಪಾತ್ರಗಳಲ್ಲಿರುತ್ತಾರೆ. ಸಂಜು ವೆಡ್ಸ್ ಗೀತಾ, ಮೈನಾಗೆ ಸಂಗೀತ ನೀಡಿದ್ದ ಜೆಸ್ಸಿ ಗಿಫ್ಟ್ ಮ್ಯೂಸಿಕ್ ಇರಲಿದೆ. ಅಂದಹಾಗೆ ಸದ್ಯಕ್ಕೆ ಚಿತ್ರದ ಟೈಟಲ್ ಶ್ರೀಕೃಷ್ಣ@ಜಿಮೇಯ್ಲ್ ಡಾಟ್ ಕಾಮ್.
Related Articles :-