` ರಂಗಿತರಂಗ ನಿರ್ಮಾಪಕರ ಹೊಸ ಸಿನಿಮಾ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
rangitaranga producer hk prakash all set for next film
KH Prakash

ರಂಗಿತರಂಗ ಚಿತ್ರದ ನಿರ್ಮಾಪಕ ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರದ ಸಹ ನಿರ್ಮಾಪಕರಾಗಿದ್ದ ಕೆ.ಎಚ್.ಪ್ರಕಾಶ್ ಹೊಸ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಈ ಬಾರಿಯೂ ಅವರು ಓಕೆ ಮಾಡಿರುವುದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನ.

ಭರತ್ ಎಂಬ ರೇಡಿಯೋ, ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ್ದ ಹುಡುಗ ಈ ಚಿತ್ರಕ್ಕೆ ಡೈರೆಕ್ಟರ್. ಈ ಚಿತ್ರ ಪ್ರಕಾಶ್ ಅವರ ಶ್ರೀದೇವಿ ಎಂಟರ್‍ಪ್ರೈಸಸ್‍ನಲ್ಲಿ ತಯಾರಾಗಲಿದೆ.

103 ವರ್ಷ ಹಳೆಯ ಬ್ರಿಟಿಷ್ ಪ್ರಾಚ್ಯವಸ್ತು ಸಂಶೋಧನಾ ಕಟ್ಟಡದಲ್ಲಿ ನಡೆಯುವ ರಹಸ್ಯ ಘಟನಾವಳಿಗಳೇ ಚಿತ್ರದ ಕಥಾವಸ್ತು. ಪ್ರಿಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಶೂಟಿಂಗ್ ಸ್ಪಾಟ್ ಗುರುತಿಸಿದ್ದೇವೆ. ಕಲಾವಿದರ ಆಯ್ಕೆಗಾಗಿ ಅಡಿಷನ್ ಶುರು ಮಾಡಿದ್ದೇವೆ ಎಂದು ಮಾಹಿತಿ ಕೊಟ್ಟಿದ್ದಾರೆ ಭರತ್.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery