` ವಿಜಯಲಕ್ಷ್ಮೀ ದರ್ಶನ್ ಕೊಟ್ಟ ಯಜಮಾನ ಸಂದೇಶ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
vijaylakshmi darshan's covid message
Vijaylakshmi darshan

ಲಾಕ್ ಡೌನ್ ಶುರುವಾದಾಗಿನಿಂದ ಹಲವರು ಜನರಿಗೆ ಕೊಟ್ಟ ಸಂದೇಶಗಳದ್ದೆಲ್ಲ ಒಂದು ತೂಕವಾದ್ರೆ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೊಟ್ಟಿರುವ ಸಂದೇಶದ್ದೇ ಬೇರೆ ತೂಕ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ, ವಿಜಯಲಕ್ಷ್ಮೀ ಈಗ ಪತಿ ಯಜಮಾನನ ದಾರಿ ತುಳಿದಿದ್ದಾರೆ. ಯಜಮಾನ ಚಿತ್ರದಲ್ಲಿ ದರ್ಶನ್ ಕೊಟ್ಟಿದ್ದ ಸಂದೇಶ ನೆನಪಿದೆ ತಾನೇ.. ಆ ಚಿತ್ರ ಸ್ಥಳೀಯ ಬ್ರಾಂಡ್ಗಳು ಉಳಿಯಬೇಕು, ದೇಶೀ ವಸ್ತುಗಳು ಬೆಳೆಯಬೇಕು ಅನ್ನೋ ಮೆಸೇಜ್ ಕೊಟ್ಟಿತ್ತು. ಈಗ ವಿಜಯಲಕ್ಷ್ಮಿ ಕೊಟ್ಟಿರುವ ಸಂದೇಶವೂ ಅಂತಹುದ್ದೇ.

ದರ್ಶನ್ ಪತ್ನಿ ಕೊಟ್ಟಿರೋ ಸಂದೇಶ ಇಷ್ಟೆ, ದೊಡ್ಡ ದೊಡ್ಡ ಕಂಪೆನಿಗಳು ಹೇಗೋ ತಡೆದುಕೊಳ್ತವೆ. ಆದರೆ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕು ಎಂದರೆ, ನಾವು ನಮ್ಮ ಅಕ್ಕಪಕ್ಕದವರನ್ನು ಬೆಳೆಸಬೇಕು ಅನ್ನೋ ಸಂದೇಶ ಕೊಟ್ಟಿದ್ದಾರೆ. ಅವರು ಹೇಳಿರೋದನ್ನು ಫಾಲೋ ಮಾಡೋದು ಕಷ್ಟವೇನಲ್ಲ.

ನಮ್ಮ ಮನೆಗೆ ಬೇಕಾದ ವಸ್ತುಗಳನ್ನು ಸಮೀಪದ ಚಿಕ್ಕ ಕಿರಾಣಿ ಅಂಗಡಿಗಳಿಂದಲೇ ಖರೀದಿಸಬೇಕು. ಸಣ್ಣ ವ್ಯಾಪಾರಿಗಳು ಉಳಿಬೇಕು. ತರಕಾರಿಗಳನ್ನ ಕೂಡಾ ಸ್ಥಳೀಯ ವ್ಯಾಪಾರಿಗಳ ಬಳಿಯೇ ಖರೀದಿಸಿ. ಪಕ್ಕದ ಪುಟ್ಟ ಹೋಟೆಲಿಗೋ, ದರ್ಶಿನಿಗೋ ಹೋಗಿ ಫಿಲ್ಟರ್ ಕಾಫಿ ಕುಡಿಯಿರಿ.

ಅಮೇಜಾನ್ ಹೇಗೋ ಬದುಕಿಬಿಡುತ್ತೆ. ಆದರೆ ಸಣ್ಣ ವ್ಯಾಪಾರಿಗಳು ಬದುಕಲ್ಲ. ಅವರನ್ನು ಬದುಕಿಸಿಕೊಳ್ಳೋಣ. ಪಿಜ್ಜಾ ಹಟ್ಗಳು ಹೇಗೋ ಉಳಿದುಕೊಳ್ಳುತ್ವೆ. ದರ್ಶಿನಿ, ಹೋಟೆಲ್ಗಳನ್ನು ಉಳಿಸಿಕೊಳ್ಳೋಣ. ಮೆಕ್ಡೊನಾಲ್ಡ್, ಪಿಜ್ಜಾ ಹಟ್ಗಳು ಮತ್ತೆ ಚುರುಕಾಗ್ತವೆ. ಶಾಪಿಂಗ್ ಮಾಲ್ಗಳೂ ಏನೂ ಆಗಲ್ಲ. ಆದರೆ ಸಣ್ಣ ವ್ಯಾಪಾರಿಗಳನ್ನು ನಾವು ಉಳಿಸಿಕೊಳ್ಳಬೇಕು ಅನ್ನೋ ಸಂದೇಶ ಕೊಟ್ಟಿದ್ದಾರೆ. ಸಿಂಪಲ್ ಆಗಿದೆ ಅಲ್ವಾ..?

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery