` ಅಪಘಾತದ ಅಂತೆ ಕಂತೆಗಳಿಗೆಲ್ಲ ಶರ್ಮಿಳಾ ಮಾಂಡ್ರೆ ಉತ್ತರ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
sharmeila mandre answers all rumors related to the accident
Sharmila Mandre

ಅಪಘಾತದ ನಂತರ ಚೇತರಿಸಿಕೊಂಡಿದ್ದೇನೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣಮುಖಳಾಗುತ್ತೇನೆ. ಅಪಘಾತದ ಸಂದರ್ಭದಲ್ಲಿ ನನಗೆ ಚಿಕಿತ್ಸೆ ನೀಡಿದ ವೈದ್ಯರು, ನನ್ನೊಂದಿಗೆ ನಿಂತ ನನ್ನ ಕುಟುಂಬದವರು, ಗೆಳೆಯರು, ಹಿತೈಶಿಗಳಿಗೆ ಧನ್ಯವಾದಗಳು.

ಶರ್ಮಿಳಾ ಮಾಂಡ್ರೆ ಅವರ ಪೇಜ್‍ನಲ್ಲಿ ಕಾಣಿಸಿಕೊಂಡ ಸ್ಟೇಟಸ್ ನೋಡಿ ಅಭಿಮಾನಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರೆ ಅಚ್ಚರಿಯಿಲ್ಲ. ಅದರ ಜೊತೆಯಲ್ಲೇ ಅಪಘಾತದ ವೇಳೆ ತಮ್ಮ ಬಗ್ಗೆ ಹರಡಿದ್ದ ಅಂತೆ ಕಂತೆಗಳೂ ನನಗೆ ಗೊತ್ತಿವೆ ಎಂದಿದ್ದಾರೆ.

ಏಪ್ರಿಲ್ 4ರಂದು ಬೆಂಗಳೂರಿನ ವಸಂತ ನಗರದ ಫ್ಲೈಓವರ್ ಬಳಿ ಶರ್ಮಿಳಾ ಮಾಂಡ್ರೆ ಅವರಿದ್ದ ಕಾರು, ಪಿಲ್ಲರ್‍ಗೆ ಡಿಕ್ಕಿ ಹೊಡೆದಿತ್ತು. ಆಗ ಲಾಕ್‍ಡೌನ್ 01 ಜಾರಿಯಲ್ಲಿತ್ತು. ತುಂಬಾ ಸ್ಟ್ರಿಕ್ಟ್ ಆಗಿ ನಡೆದ ಲಾಕ್ ಡೌನ್ ಅದು. ಆ ಸಂದರ್ಭದಲ್ಲೇ ಅಪಘಾತ ಸಂಭವಿಸಿದ್ದು.

ಶರ್ಮಿಳಾ ಮಾಂಡ್ರೆ ನೈಟ್ ಪಾರ್ಟಿ ಮುಗಿಸಿ ಹೋಗುವಾಗ ಆಕ್ಸಿಡೆಂಟ್ ಆಯ್ತಂತೆ. ಕಾರ್‍ನಲ್ಲಿದ್ದವರೆಲ್ಲ ತುಂಬಾ ಕುಡಿದಿದ್ದರಂತೆ. ಅದೇ ಕಾರಣಕ್ಕೆ ಶರ್ಮಿಳಾ ತಮ್ಮ ಹೆಸರು ಮುಚ್ಚಿಟ್ಟು ಟ್ರೀಟ್‍ಮೆಂಟ್ ತೆಗೆದುಕೊಂಡರಂತೆ. ಶರ್ಮಿಳಾ ಅವರ ಮುಖ ಡ್ಯಾಮೇಜ್ ಆಗಿದ್ಯಂತೆ.. ಒಂದೇ..ಎರಡೇ.. ಇನ್ನೂ ಕೆಲವು ಲಿಮಿಟ್ ಮೀರಿ ಹೋಗಿದ್ದವು.

ಈ ಎಲ್ಲವೂ ನನಗೆ ಗೊತ್ತು ಎಂದಿರೋ ಶರ್ಮಿಳಾ, ಅವುಗಳಿಗೆ ಉತ್ತರಿಸುವ ಪ್ರಯತ್ನವನ್ನೂ ಮಾಡಿಲ್ಲ. ಅದೊಂದು ವಿಷಯವೇ ಅಲ್ಲ ಎನ್ನುವಂತೆ ಸೈಡಿಗೆ ತಳ್ಳಿದ್ದಾರೆ. ಏಕೆಂದರೆ ಅವರ ಕೈಲೀಗ ಯೋಗರಾಜ್ ಭಟ್ಟರ ಗಾಳಿಪಟ 2 ಇದೆ. ಅದು ಚಿತ್ರೀಕರಣ ಹಂತದಲ್ಲಿದೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery