` ರೈತರಿಗೆ ಮಾರ್ಕೆಟ್ ಮತ್ತು ಮಾರ್ಗದರ್ಶನ : ಪುಷ್ಕರ್ ಮಲ್ಲಿಕಾರ್ಜುನಯ್ಯ ಪ್ಲಾನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
pushkar's plans for agricultural platform
Pushkar Mallikarjunaiah

ಪುಷ್ಕರ್ ಮಲ್ಲಿಕಾರ್ಜುನಯ್ಯ, ಕನ್ನಡದ ಸ್ಟಾರ್ ನಿರ್ಮಾಪಕರಲ್ಲಿ ಒಬ್ಬರು. ಸದ್ಯಕ್ಕಂತೂ ಅವರು ಮುಟ್ಟಿದ್ದೆಲ್ಲ ಚಿನ್ನ. ಈ ಲಾಕ್‍ಡೌನ್ ಮಧ್ಯೆ ಪುಷ್ಕರ್ ಹೊಸದೊಂದು ಸಾಹಸಕ್ಕೆ ಕೈ ಹಾಕುವ ಮನಸ್ಸು ಮಾಡಿದ್ದಾರೆ. ಅದಕ್ಕೆ ಅವರಿಗೆ ನೆರವಾಗಿರೋದು ಇಸ್ರೇಲ್‍ನಲ್ಲಿ ಮಾಡಿಕೊಂಡು ಬಂದ ಕೃಷಿ ಅಧ್ಯಯನ.

ಅಲ್ಲಿ ಬಿಸಿಲು ಹೆಚ್ಚು. ನೀರೂ ಇಲ್ಲ. ಏನೇನೋ ಸಾಧಿಸಿದ್ದಾರೆ. ನಮ್ಮಲ್ಲಿ ನೀರಿದೆ. ಒಳ್ಳೆಯ ಹವಾಮಾನವೂ ಇದೆ. ಇದನ್ನು ಬಳಸಿಕೊಂಡು ಏನಾದರೂ ಮಾಡಬೇಕು. ಮಾರುಕಟ್ಟೆ, ಸಾವಯವ ಕೃಷಿ ವಿಧಾನ, ಕೋಲ್ಡ್ ಸ್ಟೋರೇಜ್ ವ್ಯವಸ್ಥೆ, ಕಟಾವಿಗೆ ಮುನ್ನ ಗ್ರಾಹಕರನ್ನು ಗುರುತಿಸುವ ಪ್ರಕ್ರಿಯೆ, ವರ್ಷಪೂರ್ತಿ ಹಣ್ಣು, ತರಕಾರಿಗೆ ಒಂದೇ ಬೆಲೆ.. ಹೀಗೆ ಹಲವು ಕನಸುಗಳನ್ನಿಟ್ಟುಕೊಂಡು ಆ್ಯಪ್ ತಯಾರು ಮಾಡುತ್ತಿದ್ದೇವೆ. ಯಾವ್ಯಾವ ರೈತರು ಏನೇನು ಬೆಳೆಯುತ್ತಿದ್ದಾರೆ, ಎಲ್ಲೆಲ್ಲಿ, ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದ್ದಾರೆ ಎಂಬ ಮಾಹಿತಿಯೂ ಇದರಲ್ಲಿರುತ್ತೆ ಎನ್ನುವ ಪುಷ್ಕರ್, ಈ ಮಾಹಿತಿಗಾಗಿ ಐಎಎಸ್ ಅಧಿಕಾರಿಗಳು, ಕೃಷಿ ತಜ್ಞರು, ಪರಿಣತ ರೈತರನ್ನು ಭೇಟಿ ಮಾಡುತ್ತಿದ್ದಾರೆ.

ನನ್ನೊಂದಿಗೆ ಇನ್ನೂ 10 ಗೆಳೆಯರು ಕೈಜೋಡಿಸಿದ್ದಾರೆ. ರೈತರಲ್ಲಿ ಕೋಟಿ ಕೋಟಿ ಲಾಭ ಮಾಡುತ್ತಿರುವವರೂ ಇದ್ದಾರೆ. ಸಣ್ಣ ರೈತರನ್ನು ಆ ಮುಖ್ಯವಾಹಿನಿಗೆ ತರುವುದು ನಮ್ಮ ಉದ್ದೇಶ ಎನ್ನುವ ಪುಷ್ಕರ್ ಕಣ್ಣಲ್ಲಿ ರೈತರಿಗೆ ನೆರವಾಗುವ ಕನಸುಗಳಿರುವುದಂತೂ ಸತ್ಯ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery