ಪ್ರಶಾಂತ್ ನೀಲ್ ಮತ್ತು ಜ್ಯೂ.ಎನ್‍ಟಿಆರ್ ಒಟ್ಟಿಗೇ ಸಿನಿಮಾ ಮಾಡ್ತಾರಾ..? ಕೆಜಿಎಫ್ ನೋಡಿದವರ ಮನಸ್ಸು ಹುಚ್ಚೆದ್ದು ಕುಣಿಯುತ್ತಿದೆ. ಪ್ರಶಾಂತ್ ಮೇಕಿಂಗ್ ಸ್ಟೈಲ್ ಮತ್ತು ಎನ್‍ಟಿಆರ್ ಪವರ್‍ಫುಲ್ ಆಕ್ಟಿಂಗ್ ಜೊತೆಯಾದರೆ ಒಂದು ವಂಡರ್‍ಫುಲ್ ಸಿನಿಮಾ ಸೃಷ್ಟಿಯಾಗುತ್ತೆ ಅನ್ನೋದೇ ಥ್ರಿಲ್ ಆಗೋಕೆ ಕಾರಣ. ಅಂಥಾದ್ದೊಂದು ಸುದ್ದಿ ಓಡಾಡುತ್ತಿದ್ದರೂ, ಅಧಿಕೃತ ಮಾಹಿತಿ ಸಿಕ್ಕಿರಲಿಲ್ಲ. ಅಫಿಷಿಯಲ್ ಆಗಿರಲಿಲ್ಲ. ಅಫ್‍ಕೋರ್ಸ್, ಈಗಲೂ ಅದು ಅಫಿಷಿಯಲ್ ಅಲ್ಲ. ಆದರೆ ಪ್ರಶಾಂತ್ ನೀಲ್ ಅವರ ಒಂದು ಟ್ವೀಟ್, ಎನ್‍ಟಿಆರ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಪರಿ ಅಭಿಮಾನಿಗಳ ಕನಸಿಗೆ ರೆಕ್ಕೆಪುಕ್ಕ ಮೂಡಿಸಿರುವುದಂತೂ ಸುಳ್ಳಲ್ಲ. ಇಷ್ಟಕ್ಕೂ ಆ ಟ್ವೀಟ್‍ನಲ್ಲಿ ಏನಿದೆ..?
ಅಂತೂ.. ಒಂದು ಪರಮಾಣು ಸ್ಥಾವರದ ಪಕ್ಕ ಕುಳಿತರೆ ಆ ಅನುಭವ ಹೇಗಿರುತ್ತೆ ಅನ್ನೋ ಫೀಲ್ ಅರ್ಥ ಆಯ್ತು. ಮುಂದಿನ ಸಲ ನನ್ನ ರೇಡಿಯೇಷನ್ ಸೂಟ್ ಧರಿಸಿಕೊಂಡು ನಿಮ್ಮ ಕ್ರೇಜಿ ಎನರ್ಜಿ ಹತ್ತಿರ ಸುಳಿಯುತ್ತೇನೆ. ಹ್ಯಾಪಿ ಬರ್ತ್ ಡೇ ಸೋದರ.. ಶೀಘ್ರದಲ್ಲೇ ಭೇಟಿಯಾಗೋಣ..
ಇದಿಷ್ಟು ಪ್ರಶಾಂತ್ ನೀಲ್ ಅವರ ಸಾಲು. ಈಗ ಅಭಿಮಾನಿಗಳ ನಿರೀಕ್ಷೆ ಗರಿಗೆದರೋಕೆ ಕಾರಣ ಇಷ್ಟೆ.. ಈ ಮೂಲಕ ಪ್ರಶಾಂತ್ ತಾವು ಮತ್ತು ಎನ್‍ಟಿಆರ್ ಭೇಟಿಯಾಗೋದನ್ನು ಖಚಿತಪಡಿಸಿದ್ದಾರೆ. ಶೀಘ್ರದಲ್ಲೇ ಭೇಟಿಯಾಗುತ್ತಾರೆ. ನೋ ಡೌಟ್, ಅವರು ಮುಂದಿನ ಭೇಟಿಯಲ್ಲಿ ಮಾತನಾಡೋದು ಸಿನಿಮಾ ಬಗ್ಗೆನೇ ಅನ್ನೊದು ಅಭಿಮಾನಿಗಳ ಲೆಕ್ಕಾಚಾರ. ಅಷ್ಟೇ ಅಲ್ಲ, ಪ್ರಶಾಂತ್ ನೀಲ್ ಅವರಿಗೆ 2 ಕೋಟಿ ಅಡ್ವಾನ್ಸ್ ಕೊಟ್ಟಿದ್ದಾರೆ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.