ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಇನ್ನೂ ರಿಲೀಸ್ ಆಗಿಲ್ಲ. ಯಾವಾಗ ರಿಲೀಸ್ ಆಗುತ್ತೆ ಅನ್ನೋದೂ ಗೊತ್ತಿಲ್ಲ. ಕನ್‍ಫರ್ಮ್ ಡೇಟ್ ಸಿಕ್ಕಿಲ್ಲ. ಕೊರೊನಾ ಹೋಗಿಲ್ಲ. ಥಿಯೇಟರ್ ತೆರೆದಿಲ್ಲ. ಇಷ್ಟಿದ್ದರೂ ರಾಬರ್ಟ್ ಚಿತ್ರದ ನಿರ್ಮಾಪಕರಿಗೆ ನರ್ತಕಿ ಥಿಯೇಟರ್ ಮಾಲೀಕರು ಕೈಮುಗಿದು ಗ್ರೇಟ್ ಎಂದಿದ್ದಾರೆ. ಏಕೆ ಅನ್ನೋದಕ್ಕೆ ಕಾರಣ ಇಲ್ಲಿದೆ.
ರಾಬರ್ಟ್ ಚಿತ್ರಕ್ಕೆ ಅಮೇಜಾನ್ ಪ್ರೈಂ 70 ಕೋಟಿಯ ಭರ್ಜರಿ ಆಫರ್ ಕೊಟ್ಟಿತ್ತು. ಆದರೆ ನಿರ್ಮಾಪಕ ಉಮಾಪತಿ ಅದನ್ನು ರಿಜೆಕ್ಟ್ ಮಾಡಿದ್ದರು. ನರ್ತಕಿ ಚಿತ್ರಮಂದಿರದ ಮಾಲೀಕ ನರಸಿಂಹ ಅವರು ರಾಬರ್ಟ್ ನಿರ್ಮಾಪಕರೇ ಗ್ರೇಟ್ ಅನ್ನೋದಕ್ಕೆ ಕಾರಣವೇ ಇದು.
ರಾಬರ್ಟ್ ನಿರ್ಮಾಪಕರು ಥಿಯೇಟರ್ ಮಾಲೀಕರು ಮತ್ತು ಕಾರ್ಮಿಕರ ಕಷ್ಟ ಅರ್ಥ ಮಾಡಿಕೊಂಡಿದ್ದಾರೆ. ಅಷ್ಟು ದೊಡ್ಡ ಆಫರ್ ಬಂದರೂ ಸಿನಿಮಾವನ್ನು ಥಿಯೇಟರಿನಲ್ಲಿಯೇ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ. ಕಲಾವಿದರಿಗೆ ಸ್ಟಾರ್ ಪಟ್ಟ ತಂದುಕೊಡುವುದೇ ಚಿತ್ರಮಂದಿರಗಳು. ಚಿತ್ರವನ್ನು ದರ್ಶನ್ ಅಭಿಮಾನಿಗಳು ಕೈ ಬಿಡುವುದಿಲ್ಲ ಎನ್ನುವ ನಂಬಿಕೆಯಿದೆ ಎನ್ನುವುದು ನರಸಿಂಹ ಅವರ ಭರವಸೆ.
ನರಸಿಂಹ ಅವರ ಈ ಮಾತಿಗೆ ಕಾರಣ ಬೇರೇನಲ್ಲ. ಇತ್ತೀಚೆಗೆ ಪುನೀತ್ ರಾಜ್‍ಕುಮಾರ್ ತಮ್ಮ ನಿರ್ಮಾಣದ ಎರಡು ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಿದ್ದಾರೆ. ಇದಕ್ಕೆ ವ್ಯಕ್ತವಾಗಿರುವ ಪರ ವಿರೋಧ ಪ್ರತಿಕ್ರಿಯೆಗಳಲ್ಲಿ ಇದೂ ಒಂದು.