ಇದೇ ಮೇ 18ರಿಂದ ಜಿಮ್‍ಗಳು ಓಪನ್ ಆಗಲಿವೆ. ಲಾಕ್ ಡೌನ್ ಶುರುವಾಗುವ ಮೊದಲೇ ಬಾಗಿಲು ಮುಚ್ಚಿದ ಜಿಮ್‍ಗಳು ಮತ್ತೆ ವರ್ಕೌಟ್ ಶುರು ಮಾಡಲಿವೆ. ಅಧಿಕೃತ ಅದೇಶವಲ್ಲದೇ ಹೋದರೂ, ಸುಳಿವನ್ನಂತೂ ಕೊಟ್ಟಿದೆ ರಾಜ್ಯ ಸರ್ಕಾರ.
ಮದ್ಯದಂಗಡಿ ಓಪನ್ ಮಾಡಿದ ವೇಳೆ ನಟ ದುನಿಯಾ ವಿಜಿ, ಜಿಮ್ ಟ್ರೈನರ್‍ಗಳ ಪರವಾಗಿ ಸಿಎಂಗೆ ಮನವಿ ಮಾಡಿದ್ದರು. ಎಲ್ಲ ನಿಯಮ ಪಾಲಿಸುತ್ತೇವೆ ಅವಕಾಶ ಕೊಡಿ ಎಂದು ಬೇಡಿದ್ದರು. ಈಗ ಜಿಮ್ ಟ್ರೈನರ್ ಸೆಂಟರ್‍ಗಳನ್ನು ತೆರೆಯಲಿದ್ದಾರೆ ಎಂದು ಗೊತ್ತಾಯ್ತು. ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಧನ್ಯವಾದಗಳು ಎಂದಿರುವ ವಿಜಿ, ಕೊರೊನಾ ಸೂತ್ರಗಳನ್ನು ತಪ್ಪದೆ ಪಾಲಿಸಿ. ಎಚ್ಚರಿಕೆಯಿಂದ ಇರಿ ಎಂದು ಜಿಮ್ ಟ್ರೈನರುಗಳಿಗೂ ಸಲಹೆ ಕೊಟ್ಟಿದ್ದಾರೆ.