ಎಲ್ಲವೂ ಪ್ಲಾನ್ ಪ್ರಕಾರವೇ ನಡೆದಿದ್ದರೆ ಇಷ್ಟು ಹೊತ್ತಿಗೆ ಗಾಳಿಪಟ 2 ಚಿತ್ರ ವಿದೇಶದಲ್ಲೂ ಶೂಟಿಂಗ್ ಮುಗಿಸಿಕೊಂಡು ಬಂದು ಪೋಸ್ಟ್ ಪ್ರೊಡಕ್ಷನ್ ಫೈನಲ್ ಸ್ಟೇಜ್ನಲ್ಲಿರುತ್ತಿತ್ತು. ಎಲ್ಲ ಯೋಜನೆಗಳನ್ನೂ ನುಂಗಿಹಾಕಿದ್ದು ಕಣ್ಣಿಗೆ ಕಾಣದ ಕೊರೊನಾ. ಈಗ ಪೋಸ್ಟ್ ಪ್ರೊಡಕ್ಷನ್ ಕೆಲಸ ಶುರುವಾಗಿದೆ.
`ಮೊದಲು ನಮ್ಮ ಪ್ಲಾನ್ ಇದ್ದದ್ದು ಉತ್ತರ ಭಾರತದಲ್ಲಿ ಶೂಟಿಂಗ್ ಅಂತ. ಆದರೆ ಅದು ಆನಂತರ ಯೂರೋಪ್ಗೆ ಶಿಫ್ಟ್ ಆಗಿತ್ತು. ಈಗ ವಿದೇಶಗಳಿಗೆ ಹೋಗೋ ಹಾಗಿಲ್ಲ. ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್ ಮಾಡೋ ಪ್ಲಾನ್ ಇದೆ. ಲೊಕೇಷನ್ ಕೂಡಾ ಹೊಂದಾಣಿಕೆಯಾಗುತ್ತಿದೆ' ಎಂದಿದ್ದಾರೆ ಯೋಗರಾಜ್ ಭಟ್.
ಗಣೇಶ್, ದಿಗಂತ್, ಲೂಸಿಯಾ ಪವನ್ ಮತ್ತು ಅನಂತ್ ನಾಗ್ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರವಿದು.