ನಟಿ ಅಮೂಲ್ಯ ಸೀಮಂತ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಹಾಗಂತ ಅವರು ತಾಯಿಯಾಗುತ್ತಿದ್ದಾರೆ ಎಂದುಕೊಳ್ಳಬೇಡಿ. ಇದು ಅವರ 3ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದ ಗಳಿಗೆಯನ್ನು ಅವರು ಸಂಭ್ರಮಿಸಿದ ರೀತಿ.
ಕೋವಿಡ್ 19 ಹೋರಾಟ ಶುರುವಾದಾಗಿನಿಂದ ಕಾರ್ಮಿಕರಿಗೆ ಕಿಟ್ ವಿತರಣೆ, ಮಾಸ್ಕ್ ವಿತರಣೆ ಸೇರಿದಂತೆ ಪತಿ ಜಗದೀಶ್ ಜೊತೆ ಸಂಪೂರ್ಣ ಬ್ಯುಸಿಯಾಗಿರುವ ಅಮೂಲ್ಯ, ಈಗ ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿರುವುದ ಸಾರ್ವಜನಿಕ ಆಸ್ಪತ್ರೆಯೊಂದ ಗರ್ಭಿಣಿಯರ ಜೊತೆ.
ರಾಜರಾಜೇಶ್ವರಿ ನಗರದ ಬಂಗಾರಪ್ಪ ನಗರದಲ್ಲಿರೋ ಸಾರ್ವಜನಿಕ ಆಸ್ಪತ್ರೆಯಲ್ಲಿ ಗರ್ಭಿಣಿಯರಿಗೆ ನ್ಯೂಟ್ರಿಷನ್ ಕಿಟ್ ವಿತರಿಸಿ, ಸೀಮಂತದ ಕಾಣಿಕೆ ನೀಡಿ ಮದುವೆ ವಾರ್ಷಿಕೋತ್ಸವ ಆಚರಿಸಿದ್ದಾರೆ.