ರಚಿತಾ ರಾಮ್ ಚಿತ್ರರಂಗಕ್ಕೆ 7 ವರ್ಷಗಳಾಗಿ ಹೋಯ್ತಾ..? ಹೌದು, ಸ್ವತಃ ಅವರಿಗೂ ಅಚ್ಚರಿಯೇ. ಕನ್ನಡದಲ್ಲಿ ರಚಿತಾ ರಾಮ್ ಒಂಥರಾ ಲಕ್ಕಿ ಹೀರೋಯಿನ್. ಅವರು ನಟಿಸಿದ್ದ ಚಿತ್ರಗಳು ಸೋತಿದ್ದೇ ಕಡಿಮೆ.
ಬುಲ್ ಬುಲ್ ಮೂಲಕ ತೆರೆಗೆ ಬಂದ ರಚಿತಾ ರಾಮ್ ಇದುವರೆಗೆ ನಟಿಸಿದ್ದ ಚಿತ್ರಗಳ ಒಟ್ಟು ಸಂಖ್ಯೆ 20. ದರ್ಶನ್, ಶಿವರಾಜ್‍ಕುಮಾರ್, ಪುನೀತ್, ಸುದೀಪ್, ಗಣೇಶ್, ಧ್ರುವ ಸರ್ಜಾ, ಶ್ರೀಮುರಳಿ, ಉಪೇಂದ್ರ, ರಮೇಶ್ ಅರವಿಂದ್, ನಿಖಿಲ್, ದುನಿಯಾ ವಿಜಯ್, ನೀನಾಸಂ ಸತೀಶ್ ಜೊತೆ ನಟಿಸಿದ್ದಾರೆ. ಏಕ್ ಲವ್ ಯಾ, ಜೋಗಿ ಪ್ರೇಮ್ ನಿರ್ದೇಶನದ ಸಿನಿಮಾ. ಮುಂದಿನ ಭರ್ಜರಿ ನಿರೀಕ್ಷೆಯಲ್ಲಿದೆ.
ಅರೆ.. ನಾನು ಬಂದು 7 ವರ್ಷವಾಗಿ ಹೋಯ್ತಾ ಎಂದು ನೆನಪಿಸಿಕೊಂಡಿರುವ ರಚಿತಾ ರಾಮ್, ತಮಗೆ ಅವಕಾಶ ನೀಡಿದ ತೂಗುದೀಪ ಪ್ರೊಡಕ್ಷನ್ಸ್‍ಗೆ ಧನ್ಯವಾದ ಅರ್ಪಿಸಿದ್ದಾರೆ.