` ಮೊಬೈಲ್‍ನಲ್ಲೇ ಥಿಯೇಟರ್.. ಒಟಿಟಿ ಮ್ಯಾಜಿಕ್.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ott platforms shakes film industry
OTT Platforms Shakes Film Industry

ತಮಿಳುನಾಡಿನಲ್ಲಿ ಒಂದು ಆಂದೋಲನವೇ ಎದ್ದಿದೆ. ಚಿತ್ರ ಪ್ರದರ್ಶಕರೆಲ್ಲ ಒಟ್ಟಾಗಿ ಸೇರಿ ನಟ ಸೂರ್ಯ ಮತ್ತು ಜ್ಯೋತಿಕಾ ವಿರುದ್ಧ ಸಮರವನ್ನೇ0 ಸಾರಿಬಿಟ್ಟಿದ್ದಾರೆ. ಇನ್ನು ಮುಂದೆ ಸೂರ್ಯ ಮತ್ತು ಜ್ಯೋತಿಕಾ, ಮತ್ತವರ ಬ್ಯಾನರ್ ಚಿತ್ರಗಳನ್ನು ಚಿತ್ರಮಂದಿರಗಳಲ್ಲಿ ಪ್ರದರ್ಶನ ಮಾಡಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಅದಕ್ಕೆ ಕಾರಣ ಇಷ್ಟೆ, ಜ್ಯೋತಿಕಾ ಅಭಿನಯದ ಪೊನ್ ಮಗಲ್ ವಂದಾಲ್ ಚಿತ್ರವನ್ನು ಥಿಯೇಟರಿಗೆ ರಿಲೀಸ್ ಮಾಡದೇ, ಒಟಿಟಿ ಪ್ಲಾಟ್‍ಫಾರ್ಮ್‍ನಲ್ಲಿ ರಿಲೀಸ್ ಮಾಡಿದ್ದು. ಪತ್ನಿ ಜ್ಯೋತಿಕಾರ ಆ ಚಿತ್ರಕ್ಕೆ ಸೂರ್ಯ ನಿರ್ಮಾಪಕ. ಆ ಬಿಸಿ ಸೂರ್ಯಗೆ ತಟ್ಟಿದೆ. ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ರಿಲೀಸ್ ಆಗೋಕೆ ಕಾಯುತ್ತಿರುವ ಸೂರ್ಯ ಅವರ ಸೂರರೈ ಪೊಟ್ರು ಚಿತ್ರವನ್ನು ಥಿಯೇಟರಿನಲ್ಲಿ ಬ್ಯಾನ್ ಮಾಡಲು ನಿರ್ಧರಿಸಿದ್ದಾರೆ ತಮಿಳು ಚಿತ್ರಪ್ರದರ್ಶಕರು. ಹಾಗಾದರೆ ಇದು ಕನ್ನಡದಲ್ಲೂ ಆಗುತ್ತಾ..? ಆ ಸಾಧ್ಯತೆ ಏನಾದರೂ ಇದೆಯಾ..? ಈ ಪ್ರಶ್ನೆ ಕೇಳಿದರೆ ಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್ (ವೀರೇಶ್ ಚಿತ್ರಮಂದಿರದ ಮಾಲೀಕರು) ನೋ ಎನ್ನುತ್ತಾರೆ.

ಸದ್ಯಕ್ಕಂತೂ ಅಂತಹ ನಿರ್ಧಾರವಿಲ್ಲ. ಏಕೆಂದರೆ ಈಗ ಚಿತ್ರ ಪ್ರದರ್ಶನ ನಡೆಯುತ್ತಿಲ್ಲ. ರೆಡಿ ಇರುವ ಚಿತ್ರಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡೋಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಥಿಯೇಟರ್‍ಗಳು ಪುನರಾರಂಭವಾದ ನಂತರವೂ ಅದೇ ರೀತಿ ಮಾಡಿದರೆ ಏನು ಮಾಡಬೇಕು ಎಂಬ ಬಗ್ಗೆ ನಂತರ ಯೋಚನೆ ಮಾಡುತ್ತೇವೆ ಎಂದಿದ್ದಾರೆ.

ಸದ್ಯಕ್ಕೆ ಪಿಆರ್‍ಕೆ ಬ್ಯಾನರ್‍ನ ಲಾ ಮತ್ತು ಪನ್ನಗಾಭರಣ ನಿರ್ದೇಶನದ ಇನ್ನೊಂದು ಚಿತ್ರವನ್ನು ಒಟಿಟಿಯಲ್ಲಿಯೇ ಡೈರೆಕ್ಟ್ ರಿಲೀಸ್ ಮಾಡುವ ಬಗ್ಗೆ ಚಿಂತನೆಯಲ್ಲಿದ್ದಾರಂತೆ ಪುನೀತ್ ರಾಜ್‍ಕುಮಾರ್.

ಫೈನಲ್ ಡಿಸಿಷನ್ ಆಗಿಲ್ಲ. ಅತ್ತ ದಯಾಳ್ ಪದ್ಮನಾಭನ್ ಕೂಡಾ ಒಳ್ಳೆಯ ರೇಟ್ ಬಂದರೆ ಸಿನಿಮಾವನ್ನು ಒಟಿಟಿಗೇ ಕೊಡೋಕೆ ರೆಡಿ ಎಂದಿದ್ದಾರೆ. ಹಾಗಂತ ಥಿಯೇಟರಿಗೆ ರಿಲೀಸ್ ಮಾಡಲ್ಲ ಎನ್ನುವುದೂ ಇಲ್ಲ. ಒಟಿಟಿ ವೀಕ್ಷಕರೇ ಬೇರೆ, ಥಿಯೇಟರ್ ಪ್ರೇಕ್ಷಕರೇ ಬೇರೆ. ಒಟಿಟಿಗೆ ತಂದರೂ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಮಾಡುತ್ತೇನೆ ಎನ್ನುವುದು ದಯಾಳ್ ಮಾತು.

ಒಟ್ಟಿನಲ್ಲಿ ಮೊಬೈಲುಗಳು ಥಿಯೇಟರುಗಳಾಗುತ್ತಿವೆ.

 

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery