ಆಕಾಶಾನೇ ಆಧರಿಸುವ.. ಈ ಭೂಮಿಯನ್ನೇ ಪಳಗಿಸುವ.. ಕೋಟಿ ಕೋಟಿ ನೋಟುಗಳ ಕೋಟೆಯ ಮೇಲೆ ಕುಳಿತಿರುವ.. ನಾಲ್ಕು ತಲೆ ಬ್ರಹ್ಮನಿಗೂ.. ಅಬ್ಬಬ್ಬಾ ಕನ್‍ಫ್ಯೂಸು ಮಾಡೋನಿವ.. ಕೋಟಿಗೊಬ್ಬ.. ಕೋಟಿಗೊಬ್ಬ..
ಯಾವಾಗ.. ಯಾವಾಗ.. ಎಂಚು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಹಬ್ಬದೂಟ. ಅರ್ಜುನ್ ಜನ್ಯ ಮತ್ತೊಮ್ಮೆ ವಂಡರ್‍ಫುಲ್ ಸ್ಕೋರ್ ಮಾಡಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಬರೆದಿರುವ ಕೋಟಿಗೊಬ್ಬ ಟೈಟಲ್ ಸಾಂಗ್ ಮ್ಯಾಜಿಕ್ ಮಾಡಿಬಿಟ್ಟಿದೆ. ಪೈಲ್ವಾನ್ ನಂತರ ಮತ್ತೊಂದು ಚಿತ್ರಕ್ಕಾಗಿ ಕಾದು ಕುಳಿತಿರುವ ಫ್ಯಾನ್ಸ್ ಲಾಕ್ ಡೌನ್ ಮುಗಿಯುತ್ತಿದ್ದಂತೆಯೇ ಸಿನಿಮಾ ರಿಲೀಸ್ ಎಂಬ ನಿರೀಕ್ಷೆಯಲ್ಲಿದ್ದಾರೆ.