` ಕೆಜಿಎಫ್ ಚಾಪ್ಟರ್ 2 ಡಬಲ್ ಸಿಹಿ ಸುದ್ದಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
kgf image
yash in KGF 2

ಕೆಜಿಎಫ್ ಚಾಪ್ಟರ್ 2 ಚಿತ್ರದ ರಿಲೀಸ್ ಡೇಟ್ ಏನೋ ಅನೌನ್ಸ್ ಆಗಿದೆ. ಆದರೆ ಟೀಸರ್ ಆಗಲೀ, ಟ್ರೇಲರ್ ಆಗಲೀ ಇಲ್ಲ. ಅಪ್‍ಡೇಟ್ ಏನೂ ಸಿಗ್ತಿಲ್ಲ. ಲಾಕ್ ಡೌನ್ ಮಧ್ಯೆಯೂ ಕೆಜಿಎಫ್ ಅಪ್‍ಡೇಟ್ ನಿರೀಕ್ಷೆಯಲ್ಲಿರೋ ಅಭಿಮಾನಿಗಳಿಗೆ ಒಂದು ಸಿಹಿ ಸುದ್ದಿ.

ಕೆಜಿಎಫ್ ಚಾಪ್ಟರ್ 2 ಚಿತ್ರದ ಟೀಸರ್ ಮತ್ತು ಟ್ರೇಲರ್ ಒಟ್ಟೊಟ್ಟಿಗೇ ಬರಲಿವೆಯಂತೆ. ಹೊಂಬಾಳೆ ಫಿಲಂಸ್‍ನ ನಿರ್ಮಾಪಕ ಕಾರ್ತಿಕ್ ಗೌಡ ನೀಡಿರುವ ಸಿಹಿ ಸುದ್ದಿ ಇದು. ಯಾವಾಗ..? ಆ ಗುಟ್ಟನ್ನು ಗೌಡರು ಬಿಟ್ಟುಕೊಟ್ಟಿಲ್ಲ.

ಪ್ರಶಾಂತ್ ನೀಲ್, ಯಶ್, ವಿಜಯ್ ಕಿರಗಂದೂರು ಕಾಂಬಿನೇಷನ್ನಿನ ಕೆಜಿಎಫ್ ಚಾಪ್ಟರ್ 2 ಈ ವರ್ಷದ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery