` ಮೈಸೂರಿಂದ ಬೆಂಗಳೂರಿಗೆ ಭಾರತಿ ವಿಷ್ಣುವರ್ಧನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bharathi vishnuvardhan reaches bangalore
Bharathi Vishnuvardhan

ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಲಾಕ್‍ಡೌನ್ ಘೋಷಣೆ ಹೊತ್ತಲ್ಲಿ ಮೈಸೂರಿನಲ್ಲಿದ್ದರು. ಲಾಕ್‍ಡೌನ್ ನಿಯಮ ಪಾಲಿಸುವ ಪಣತೊಟ್ಟು ಮೈಸೂರಿನಲ್ಲೇ ಉಳಿದುಕೊಂಡರು ಭಾರತಿ. ಔಷಧಿಗಳೂ ಇದ್ದುದ್ದರಿಂದ ಸಮಸ್ಯೆಯೇನೂ ಆಗಲಿಲ್ಲ. ಆದರೆ ಯಾವಾಗ ಏಪ್ರಿಲ್ 14ರ ನಂತರ ಲಾಕ್‍ಡೌನ್ 2.0 ಶುರುವಾಯ್ತೋ..

ಆಗ ಆತಂಕ ಶುರುವಾಯ್ತು. ಏಕೆಂದರೆ ಮಾತ್ರೆ, ಔಷಧಿಗಳು ಮುಗಿಯುತ್ತಿದ್ದವು. ಅತ್ತ.. ಮೈಸೂರಿನಲ್ಲಿ ಅವು ಸಿಗುತ್ತಲೇ ಇರಲಿಲ್ಲ. ಹಲವು ಕಡೆ ಔಷಧಿಗಾಗಿ ಹುಡಕಾಡಿದ ಭಾರತಿ, ನಂತರ ಸಮಸ್ಯೆಯನ್ನು ಅಳಿಯ ಅನಿರುದ್ಧ, ನಟಿ ತಾರಾ ಅವರಿಗೆ ತಿಳಿಸಿದ್ದಾರೆ. ತಾರಾ ಈ ಸಮಸ್ಯೆಯನ್ನು ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ತಲುಪಿಸಿದ್ದಾರೆ. ತಕ್ಷಣ ಸ್ಪಂದಿಸಿದ ಸಚಿವ ಸೋಮಶೇಖರ್, ಭಾರತಿ ಅವರಿಗೆ ವಾಹನ ಮತ್ತು ಪಾಸ್ ವ್ಯವಸ್ಥಘೆ ಮಾಡಿ ಬೆಂಗಳೂರಿಗೆ ಬರಲು ನೆರವಾಗಿದ್ದಾರೆ. ಔಷಧಿಗಳೂ ಸಿಕ್ಕಿವೆ. ಭಾರತಿ ಆರೋಗ್ಯವಾಗಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery