ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆಳೆಯರ ಬಳಗ ದೊಡ್ಡದು. ಒಂದಾನೊಂದು ಕಾಲದಲ್ಲಿ ಬುಲೆಟ್ ಪ್ರಕಾಶ್ ಕೂಡಾ ದರ್ಶನ್ ಗೆಳೆಯರ ಬಳಗದಲ್ಲಿದ್ದವರೇ. ಆದರೆ.. ಅದೇನಾಯ್ತೋ ಏನೋ.. ಬುಲೆಟ್ ಪ್ರಕಾಶ್ ಕೊನೆ ದಿನಗಳಲ್ಲಿ ದರ್ಶನ್ ಅವರ ಗೆಳೆಯರ ಬಳಗದಿಂದ ಹೊರಬಿದ್ದರು. ಏನಾಯ್ತೆಂದು ದರ್ಶನ್ ಬಾಯಿ ಬಿಡಲಿಲ್ಲ. ಬುಲೆಟ್ ಕೂಡಾ ಸ್ಪಷ್ಟವಾಗಿ ಹೇಳಲಿಲ್ಲ. ಆದರೆ ಬುಲೆಟ್ ಪ್ರಕಾಶ್ ನಿಧನದ ನಂತರ ದರ್ಶನ್ ಗೆಳೆಯನ ಕುಟುಂಬದ ನೆರವಿಗೆ ಧಾವಿಸಿ ಬಂದಿದ್ದಾರೆ.
ಅವನು ಈಗ ನನ್ನ ಗೆಳೆಯ ಹೌದೋ ಅಲ್ವೋ ಅದು ಬೇರೆ ವಿಷಯ. ಆದರೆ ಒಂದು ಕಾಲದಲ್ಲಿ ಗೆಳೆಯನಾಗಿದ್ದವನೇ ತಾನೆ. ಹೆದರಬೇಡಿ. ಬುಲೆಟ್ ಪ್ರಕಾಶ್ ಮಗಳ ಮದುವೆ ಜವಾಬ್ದಾರಿ ನನ್ನದು ಎಂಬ ಸಂದೇಶ ರವಾನಿಸಿದ್ದಾರೆ ದರ್ಶನ್. ನಿರ್ಮಾಪಕ ರಾಮಮೂರ್ತಿ ಮೂಲಕ ಪ್ರಕಾಶ್ ಕುಟುಂಬಕ್ಕೆ ಸಂದೇಶ ಕಳಿಸಿದ್ದಾರೆ.
Also Read :-