` ಆತನ ಕಷ್ಟ ಇನ್ಯಾರಿಂದಲೋ ಗೊತ್ತಾಯ್ತು. ಪುನೀತ್ ತಕ್ಷಣ ಮಾಡಿದ ಕೆಲಸ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth's helping nature
Puneeth Rajkumar

ಶಿವಣ್ಣ ಸದ್ದಿಲ್ಲದೆ ಮಾಡುತ್ತಿರುವ ಸೇವೆಯ ಸುದ್ದಿ ಗೊತ್ತಿದೆ. 32 ವರ್ಷಗಳ ಹಿಂದೆ ಅವರು ಮಾಡಿದ್ದ ಸಹಾಯ, ಇತ್ತೀಚೆಗೆ ಗೊತ್ತಾದಾಗ ಹಲವರು ಬೆರಗುಗಣ್ಣಿನಿಂದ ನೋಡಿದ್ದರು. ಈಗ ಪುನೀತ್ ಸರದಿ. ಒನ್ಸ್ ಎಗೇಯ್ನ್.. ಪುನೀತ್ ಕೂಡಾ ಥೇಟು ಅಣ್ಣನ ಹಾಗೆ.

ಇತ್ತೀಚೆಗೆ ಚಿನ್ನಪ್ಪ ಎಂಬ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಈ ಚಿನ್ನಪ್ಪ ಥಿಯೇಟರುಗಳ ಮುಂದೆ ಕಟೌಟ್ ಕಟ್ಟುವ ಕಲಾವಿದ. ಚೆಂದದ ಕಟೌಟ್ ಮಾಡುವ ಈತ ಅಣ್ಣಾವ್ರ ಮೆಚ್ಚುಗೆ ಗಳಿಸಿದ್ದ ವ್ಯಕ್ತಿ. ಇಂತಹ ಚಿನ್ನಪ್ಪನವರಿಗೆ ಕಷ್ಟವಂತೆ ಎಂದು ಯಾರೋ ಒಬ್ಬರು ಪುನೀತ್ ಕಿವಿಗೆ ಸುದ್ದಿ ಮುಟ್ಟಿಸಿದ್ದಾರೆ. ತಕ್ಷಣ ತಮ್ಮ ಸಹಾಯಕರೊಬ್ಬರಿಂದ ಚಿನ್ನಪ್ಪ ಅವರ ಮನೆಗೆ 50 ಸಾವಿರ ರೂ. ಹಣ ತಲುಪಿಸಿದ್ದಾರೆ ಪುನೀತ್.

ಚಿನ್ನಪ್ಪನವರ ಪುತ್ರ ಕೃಷ್ಣ ಹೇಳಿಕೊಳ್ಳುವವರೆಗೆ ಇದು ಯಾರಿಗೂ ಗೊತ್ತಿರಲಿಲ್ಲ ಎನ್ನುವ ವಿಷಯವೇ ವಿಶೇಷ. ಪುನೀತ್ ನಮ್ಮ ಹಾಗೂ ನಮ್ಮ ಕುಟುಂಬದ ಪಾಲಿಗೆ ದೇವರಾಗಿ ಬಂದರು ಎಂದಿದ್ದಾರೆ ಚಿನ್ನಪ್ಪನವರ ಪುತ್ರ ಕೃಷ್ಣ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery