` ಶಿವಣ್ಣ ಮಾಡಿದ್ದ ಆ ಸಹಾಯ ಬೆಳಕಿಗೆ ಬಂದಿದ್ದು 32 ವರ್ಷಗಳ ಬಳಿಕ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
shivanna's help comes into ligth after 32 years
Shivarajkumar

ಸಹಾಯ ಮಾಡುವುದು, ದಾನ ಮಾಡುವುದು ಎಡಗೈಗೆ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು. ಇದು ಕೆಲವರ ತತ್ವ. ಶಿವಣ್ಣನ ವಿಷಯದಲ್ಲಿ ಅದು ಮತ್ತೊಮ್ಮೆ ಋಜುವಾತಾಗಿದೆ. ಈ ಹಿಂದೆ ಹಲವು ಬಾರಿ ಅವರಿಂದ ಸಹಾಯ ಪಡೆದವರು ಸ್ವತಃ ಹೇಳುವವರೆಗೆ ಬೇರೆಯವರಿಗೆ ಗೊತ್ತಾಗುತ್ತಿರಲಿಲ್ಲ. ಈ ಬಾರಿಯೂ ಅಷ್ಟೆ. ಈ ಬಾರಿ ಶಿವಣ್ಣ ಮಾಡಿದ್ದ ಸಹಾಯ ಬೆಳಕಿಗೆ ಬಂದಿರುವುದು 32 ವರ್ಷಗಳ ಬಳಿಕ.

ಮೈಸೂರಿನ ಕಾರಾಗೃಹದಲ್ಲಿ 1988ರಲ್ಲಿ ಮೃತ್ಯುಂಜಯ ಚಿತ್ರದ ಶೂಟಿಂಗ್ ನಡೆದಿತ್ತು. ಆಗ ಶಿವಣ್ಣಗೆ ಅಲ್ಲಿದ್ದ ಹಲವು ಖೈದಿಗಳ ವಿಷಯ ಗೊತ್ತಾಯ್ತು. ಅವರಲ್ಲಿ ಎಷ್ಟೋ ಜನ ಸಣ್ಣ ಪುಟ್ಟ ತಪ್ಪಿಗೆ ಜೈಲಿನಲ್ಲಿದ್ದರು. ಕೆಲವರು ದಂಡದ ಹಣ ಕಟ್ಟಲಾಗದೇ ಜೈಲಿನಲ್ಲಿದ್ದರು. ವಿಷಯ ತಿಳಿದ ಶಿವಣ್ಣ ಅಂತಹ 25 ಜನರ ನೆರವಿಗೆ ಸಹಾಯ ಮಾಡಿದ್ದರು. ಆಗಿನ ಕಾಲಕ್ಕೇ ಸುಮಾರು 28 ಲಕ್ಷ ರೂಪಾಯಿ ಖರ್ಚು ಮಾಡಿ 25 ಖೈದಿಗಳ ಜೈಲುವಾಸ ಅಂತ್ಯಗೊಳಿಸಿದ್ದರು.

ಅಂದಹಾಗೆ ಈ ಬಾರಿ ಇದೆಲ್ಲವೂ ಬಹಿರಂಗವಾಗಿರುವುದು ಮಂಡ್ಯದ  ಗೋಪಾಲ್ ಎಂಬುವವರ ಮೂಲಕ. ಶಿವಣ್ಣ ಅಂದು ರಿಲೀಸ್ ಮಾಡಿಸಿದ್ದವರ ಲಿಸ್ಟಿನಲ್ಲಿ ಈ ಗೋಪಾಲ್ ಎಂಬುವವರೂ ಇದ್ದರಂತೆ. 16 ವರ್ಷದ ಹುಡುಗನಾಗಿದ್ದಾಗ ಕೊಲೆ ಕೇಸೊಂದರಲ್ಲಿ ಜೈಲು ಸೇರಿದ್ದೆ. ಶಿಕ್ಷೆ ಮುಗಿದಿದ್ದರೂ ದಂಡ ಕಟ್ಟಲಾಗದೆ ಜೈಲಿನಲ್ಲಿದ್ದೆ. ಆಗ ಶಿವಣ್ಣ ನಮಗೆ ಬೆಳಕು ತೋರಿಸಿದರು ಎಂದು ಹೇಳಿರುವ ಗೋಪಾಲ್, ಆಗ ನಡೆದ ಎಲ್ಲ ಘಟನೆಗಳನ್ನೂ ವಿವರವಾಗಿ ಬಿಚ್ಚಿಟ್ಟಿದ್ದಾರೆ.

ಹೌದಾ ಶಿವಣ್ಣ ಎಂದು ಶಿವರಾಜ್ ಕುಮಾರ್ ಅವರನ್ನೇ ಕೇಳಿದರೆ ಅವರು ಅಮ್ಮಮ್ಮಾ ಎಂದರೆ ನಕ್ಕು ಸುಮ್ಮನಾಗುತ್ತಾರೆ. ಹೌದಾ.. ಎಂದು ನಮ್ಮನ್ನೇ ಪ್ರಶ್ನಿಸಿಬಿಡುತ್ತಾರೆ. ಯೆಸ್.. ಎಡಗೈಗೆ ಕೊಟ್ಟಿದ್ದು ಬಲಗೈಗೆ ಗೊತ್ತಾಗಬಾರದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery