ಯುವರತ್ನ, ಸ್ಯಾಂಡಲ್‍ವುಡ್‍ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲೊಂದು. ಕಾರಣವನ್ನು ಪದೇ ಪದೇ ಹೇಳುವ ಪ್ರಮೇಯವೇ ಇಲ್ಲ. ಪುನೀತ್, ಸಂತೋಷ್ ಆನಂದರಾಮ್ ಮತ್ತು ಹೊಂಬಾಳೆ ಫಿಲಂಸ್ ರಾಜಕುಮಾರ ನಂತರ ಮತ್ತೆ ಒಟ್ಟಾಗಿರುವ ಸಿನಿಮಾ ಇದು. ಈಗಾಗಲೇ ಟೀಸರ್ ಸೃಷ್ಟಿಸಿರುವ ಹವಾ ಬೇರೆಯದ್ದೇ ಲೆವೆಲ್ಲಿನಲ್ಲಿದೆ. ಹೀಗಿರೋವಾಗ ಇದ್ದಕ್ಕಿದ್ದಂತೆ ಒಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡೋಕೆ ಶುರುವಾಗುತ್ತೆ. ಮೇ 21ಕ್ಕೆ ಯುವರತ್ನ ರಿಲೀಸ್.
ಅಂದಹಾಗೆ ಇದನ್ನು ಸೃಷ್ಟಿ ಮಾಡಿದವರು ಏಪ್ರಿಲ್ ಫೂಲ್ ಮಾಡೋಕೆ. ಆದರೆ, ಕಾದೂ ಕಾದೂ ಹಸಿದಿರುವ ಅಭಿಮಾನಿಗಳು ಅದು ಸುದ್ದಿಯಾಗಿದ್ದು ಏಪ್ರಿಲ್ 1ರಂದು ಅನ್ನೋದನ್ನೇ ಮರೆತುಬಿಟ್ಟರು. ಕೊನೆಗೆ ಏಪ್ರಿಲ್ ಫೂಲ್ ಸುದ್ದಿಗೆ ಸ್ವತಃ ಸಂತೋಷ್ ಆನಂದ ರಾಮ್ ಪ್ರತಿಕ್ರಿಯೆ ಕೊಟ್ಟರು.
ಯುವರತ್ನ ಮೇ 21ಕ್ಕೆ ರಿಲೀಸ್ ಆಗುತ್ತಿಲ್ಲ. ಚಿತ್ರದ ಇನ್ನೂ ಕೆಲ ಭಾಗದ ಚಿತ್ರೀಕರಣ ಹಾಗೂ ಹಾಡುಗಳ ಚಿತ್ರೀಕರಣ ಮುಗಿದಿಲ್ಲ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ಮೇ 21ಕ್ಕೆ ರಿಲೀಸ್ ಆಗಲ್ಲ.. ಆಗುತ್ತಿಲ್ಲ ಎಂದು ಸ್ಪಷ್ಟನೆ ಕೊಟ್ಟರು ಸಂತೋಷ್ ಆನಂದ ರಾಮ್.