` ನಂಜನಗೂಡು ನಾಗರತ್ನಮ್ಮ ಆಗ್ತಾರಾ ಅನುಷ್ಕಾ ಶೆಟ್ಟಿ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
will anushka shetty act in kannada films soon?
Anushka Shetty

ಅನುಷ್ಕಾ ಶೆಟ್ಟಿ ಕನ್ನಡತಿಯೇ ಆದರೂ, ಇದುವರೆಗೆ ಕನ್ನಡದಲ್ಲಿ ನಟಿಸಿಲ್ಲ. ತೆಲುಗಿನಲ್ಲಿ ಲೇಡಿ ಸೂಪರ್ ಸ್ಟಾರ್ ಆಗಿರುವ ಅನುಷ್ಕಾ ಶೆಟ್ಟಿ, ಕನ್ನಡಕ್ಕೆ ಬರುವ ಮನಸ್ಸು ಮಾಡಿರುವಂತಿದೆ. ಕನ್ನಡ ಚಿತ್ರರಂಗ ಪ್ರವೇಶಕ್ಕಾಗಿ ಅನುಷ್ಕಾ ಶೆಟ್ಟಿ ನಂಜನಗೂಡು ನಾಗರತ್ನಮ್ಮ'ನವರ ಬದುಕಿನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರಂತೆ.

ನಂಜನಗೂಡು ನಾಗರತ್ನಮ್ಮ, 17ನೇ ಶತಮಾನದಲ್ಲಿ ಬದುಕಿದ್ದ ದೇವದಾಸಿ ಹೆಣ್ಣು ಮಗಳು. ಆಕೆಯ ತಾಯಿ ಮೈಸೂರಿನ ಶ್ರೀಮಂತರೊಬ್ಬರ ಉಪಪತ್ನಿಯಾಗಿರುತ್ತಾರೆ. ಆಕೆಗೆ ಜನ್ಮ ಕೊಟ್ಟ ತಂದೆಯ ಧರ್ಮಪತ್ನಿಗೂ ಒಬ್ಬ ಮಗಳಿರುತ್ತಾಳೆ. ಆದರೆ, ನಾಗರತ್ನಮ್ಮನ ಪ್ರತಿಭೆ ಎದುರು ಧರ್ಮಪತ್ನಿಯ ಮಗಳು ಮಂಕಾಗುತ್ತಾಳೆ ಎಂದು ಭಾವಿಸಿ, ಆಕೆಯನ್ನು ನಾಟ್ಯ, ನರ್ತನ ಬಿಡುವಂತೆ ಹೇಳಿದಾಗ ನಾಗರತ್ನಮ್ಮನ ತಾಯಿ ಸವಾಲು ಹಾಕಿ ಮಗಳನ್ನು ನಾಟ್ಯ, ನರ್ತನದಲ್ಲಿ ಮುಂದುವರೆಸಿ ಗೆಲ್ಲುತ್ತಾರೆ. ಮೈಸೂರು ಅರಸರ ಸಭೆಯಲ್ಲಿ ನರ್ತಿಸಿ ಸವಾಲು ಗೆಲ್ಲುತ್ತಾರೆ ನಾಗರತ್ನಮ್ಮ. ವಿದುಷಿಯಾಗಿ ಪ್ರಖ್ಯಾತಿ ಗಳಿಸುತ್ತಾರೆ.

ಅಷ್ಟೇ ಅಲ್ಲ, ಕೆಲವು ಕೃತಿಗಳನ್ನು ಸಂಪಾದಿಸುತ್ತಾರೆ. ಪುರಂದರ ದಾಸರ ಕೀರ್ತನೆಗಳನ್ನು ಹಾಡಿ ಗೆದ್ದ ದೇವದಾಸಿ ನಾಗರತ್ನಮ್ಮ. ರಾಧಿಕಾ ಸಾಂತ್ವನಮು ಎಂಬ ಕೃತಿಯನ್ನು ಸಂಪಾದಿಸಿ, ಅದರ ವಿರುದ್ಧ ಕೆಲವರು ದಂಗೆಯೆದ್ದಾಗ ಅದನ್ನು ಎದುರಿಸಿ ಗೆದ್ದ ಹೆಣ್ಣು ಮಗಳು ನಾಗರತ್ನಮ್ಮ. ದೇವದಾಸಿಯರನ್ನು ವೇಶ್ಯೆಯರಿಗೆ ಹೋಲಿಸಿದಾಗ ನಾವು ದೇವರು, ದೇವಸ್ಥಾನದ ಮುಡಿಪು. ವೇಶ್ಯೆಯರಲ್ಲ ಎಂದು ಕೋರ್ಟಿನಲ್ಲಿ ವಾದಕ್ಕೆ ನಿಂತವರು ನಾಗರತ್ನಮ್ಮ. ತಮಿಳುನಾಡಿನಲ್ಲಿ ತ್ಯಾಗರಾಜರ ಸಮಾಧಿಯ ಜೀರ್ಣೋದ್ಧಾರ ಮಾಡಿರುವ ನಾಗರತ್ನಮ್ಮನ ಬದುಕು ಸವಾಲಿನ ಕಥೆ.

ಈಗ ಆ ಚಿತ್ರದಲ್ಲಿ ನಾಗರತ್ನಮ್ಮನಾಗಲು ಅನೂಷ್ಕಾ ಶೆಟ್ಟಿ ಆಸಕ್ತಿ ವಹಿಸಿದ್ದಾರೆ ಎನ್ನುತ್ತಿದೆ ಟಾಲಿವುಡ್. ಬಹುಶಃ ಕೋರೋನಾ ಸೈಲೆಂಟ್ ಆದ ಮೇಲೆ ಈ ಸುದ್ದಿಗೊಂದು ಸ್ಪಷ್ಟ ರೂಪ ಸಿಗಬಹುದು.

Shivarjun Movie Gallery

KFCC 75Years Celebrations and Logo Launch Gallery