` ಕಪಾಲಿ ಮೋಹನ್ ಆತ್ಮಹತ್ಯೆಗೆ ಕಾರಣವಾಯ್ತು ಆ ಬಸ್ ನಿಲ್ದಾಣ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
indise story of kapali mohan's suicide sory
Kapali Mohan Image

ಕಪಾಲಿ ಮೋಹನ್, ರಾಜ್ ಕುಟುಂಬದ ಆಪ್ತರಲ್ಲೊಬ್ಬರು. ಚಿತ್ರರಂಗದವರಿಗೆಲ್ಲ ಕಪಾಲಿ ಮೋಹನ್ ಎಂದೇ ಚಿರಪರಿಚಿತ. ಸಿನಿಮಾ ನಿರ್ಮಾಪಕರಲ್ಲದೇ ಹೋದರೂ ಫೈನಾನ್ಸ್ ಮಾಡುತ್ತಿದ್ದರು. ಚಿತ್ರ ವಿತರಣೆಯಲ್ಲಿ ತೊಡಗಿಸಿಕೊಂಡಿದ್ದವರು. ಈಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರಣವೇನು ಎಂದು ಹುಡುಕುತ್ತಾ ಹೊರಟರೆ ಕಾಣಿಸಿದ್ದು ಪೀಣ್ಯ ಬಸ್ ಸ್ಟಾಂಡ್.

ಈಗ ಸ್ಯಾಟಲೈಟ್ ಬಸ್ ಸ್ಟಾಂಡ್ ಇದೆಯಲ್ಲ, ಅದೇ ಮಾದರಿಯಲ್ಲಿ ಪೀಣ್ಯ ಬಳಿ ಒಂದು ಬಸ್ ಸ್ಟಾಂಡ್ ನಿರ್ಮಿಸಿತು ಸರ್ಕಾರ. ಉ.ಕರ್ನಾಟಕದಿಂದ ಬೆಂಗಳೂರಿಗೆ ಬರುವ ಬಸ್ಸುಗಳೆಲ್ಲ ಅಲ್ಲಿಗೆ ಹೋಗಿ, ಅಲ್ಲಿಂದ ಮೆಜೆಸ್ಟಿಕ್‍ಗೆ ಬರಬೇಕು ಎಂದು ಯೋಜನೆ ರೂಪಿಸಿತು. ಆಗ ಕಪಾಲಿ ಮೋಹನ್ ತಮ್ಮಲ್ಲಿದ್ದ ಹಣವನ್ನೆಲ್ಲ ಆ ಬಸ್ ಸ್ಟಾಂಡ್‍ನ ಅಂಗಡಿ ಮಳಿಗೆಗಳ ಬಾಡಿಗೆ ಟೆಂಡರ್‍ಗೆ ಸುರಿದುಬಿಟ್ಟರು. ಸರ್ಕಾರಕ್ಕೆ ಕೊಟ್ಟ ಡೆಪಾಸಿಟ್ ಹಣವೇ 3.10 ಕೋಟಿ. ಬಸ್ ಸ್ಟಾಂಡ್ ಎದುರು ಒಂದು ಹೋಟೆಲ್‍ನ್ನು ಕೂಡಾ ಕಟ್ಟಿಸಿದರು.

ಆದರೆ ಅದನ್ನು ಶುರು ಮಾಡಿದ ಕೆಲವೇ ದಿನಗಳಲ್ಲಿ ಬಸ್‍ನವರ ಪ್ರತಿಭಟನೆ, ಅಸಹಾಕಾರಕ್ಕೆ ಮಣಿದ ಸರ್ಕಾರ ಬಸ್ಸುಗಳನ್ನು ಮೆಜೆಸ್ಟಿಕ್ಕಿನಿಂದಲೇ ಹೊರಡುವಂತೆ ಆದೇಶ ಕೊಟ್ಟು ಬಿಟ್ಟಿತು. ಅತ್ತ ಬಸ್ ಸ್ಟಾಂಡ್‍ನಲ್ಲಿ ನೀಡಿದ್ದ ಟೆಂಡರುದಾರರಿಗೆ ಪರಿಹಾರ ಕೊಡುವ, ಪರ್ಯಾಯ ವ್ಯವಸ್ಥೆ ಕಲ್ಪಿಸುವ ಯೋಚನೆ ಕೂಡಾ ಮಾಡಲಿಲ್ಲ.

ತಮ್ಮಲ್ಲಿದ್ದ ಹಣವನ್ನೆಲ್ಲ ಅದೊಂದೇ ಉದ್ಯಮದ ಮೇಲೆ ಸುರಿದಿದ್ದ ಕಪಾಲಿ ಮೋಹನ್ ಕಂಗೆಟ್ಟು ಹೋದರು. ಸಾಲದ ಮೇಲಿನ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಬೆಳೆಯುತ್ತಲೇ ಹೋಯ್ತು.

ಇದರ ಮಧ್ಯೆ ಅವರ ಒಡೆತನದ ಹೋಟೆಲ್‍ನಲ್ಲಿ ಜೂಜು ನಡೆಯುತ್ತಿದೆ ಎಂದು ಪೊಲೀಸರು ಅರೆಸ್ಟ್ ಮಾಡಿದರು. ಇದರಿಂದ ಕಪಾಲಿ ಮೋಹನ್ ಇನ್ನಷ್ಟು ಖಿನ್ನತೆಗೆ ಒಳಗಾದರು. ಕೊನೆಗೆ ಅದು ಸಾವಿನಲ್ಲಿ ಕೊನೆಯಾಗಿದೆ.

Also Read :-

Film Financier, Distributor Kapali Mohan Commits Suicide

Shivarjun Movie Gallery

KFCC 75Years Celebrations and Logo Launch Gallery