` ಸ್ಯಾಂಡಲ್‍ವುಡ್ ಜೈ ಹೋ ಜನತಾ ಕಫ್ರ್ಯೂ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kananda film industry supports pm modi bundh
Kannada Movie Celebs Support Janata Curfew

ನಾಳೆ ಭಾನುವಾರ ದೇಶಾದ್ಯಂತ ಜನತಾ ಕಫ್ರ್ಯೂ. ಒಂದಿಡೀ ದಿನ ಮನೆಯಲ್ಲಿರಿ. ಸಂಜೆ ಹೊರಗೆ ಬಂದು ಚಪ್ಪಾಳೆ ತಟ್ಟಿ. ಅದು ನೀವು ವೈದ್ಯರಿಗೆ, ಯೋಧರಿಗೆ ನೀಡುವ ಪ್ರೋತ್ಸಾಹ, ಬೆಂಬಲ ಎಂದಿದ್ದಾರೆ ಮೋದಿ. ಅದಕ್ಕೆ ಇಡೀ ಭಾರತ ಕೈ ಜೋಡಿಸಿದೆ. ಸ್ಯಾಂಡಲ್‍ವುಡ್ ತಾರೆಯರೂ ಹಿಂದೆ ಬಿದ್ದಿಲ್ಲ.

ನಟರಾದ ಜಗ್ಗೇಶ್, ಶ್ರೀಮುರಳಿ, ನೆನಪಿರಲಿ ಪ್ರೇಮ್, ಜೋಗಿ ಪ್ರೇಮ್, ಡಾಲಿ ಧನಂಜಯ್, ನೀನಾಸಂ ಸತೀಶ್, ಅನಿರುದ್ಧ, ನಿರ್ಮಾಪಕ ಸಾ.ರಾ. ಗೋವಿಂದು, ಪ್ರಣೀತಾ, ಸಂಜನಾ, ಅಶಿಕಾ ರಂಗನಾಥ್ ಸೇರಿದಂತೆ ಹಲವರು ಮೋದಿ ಕರೆಗೆ ಬೆಂಬಲ ಕೊಟ್ಟಿದ್ದಾರೆ.

ಇಡೀ ದಿನ ಮನೆಯಲ್ಲಿರಿ, ಸಂಜೆ ನೀವು ತಟ್ಟುವ ಚಪ್ಪಾಳೆ, ವೈದ್ಯರಿಗೆ ಸಲ್ಲಿಸುವ ಅಭಿನಂದನೆ ಎಂದಿದ್ದಾರೆ.