` ಸಲಗ'ನನ್ನು `ಪ್ರಾರಂಭ'ದಲ್ಲೇ ಕಟ್ಟಿ ಹಾಕಿದ ಚೈನೀಸ್ ವೈರಸ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
corona virus halts salaga release
Salaga Movie Image

ದುನಿಯಾ ವಿಜಯ್ ನಿರ್ದೇಶನದ ಮೊದಲ ಚಿತ್ರಕ್ಕೆ ಕೊರೋನಾ ಬ್ರೇಕ್ ಹಾಕಿದೆ. ಚೈನೀಸ್ ವೈರಸ್ ಅಟ್ಟಹಾಸಕ್ಕೆ ಎಲ್ಲವೂ ರೆಡಿಯಿದ್ದು ಮುಂದಕ್ಕೆ ಹೋಗುವ ಪರಿಸ್ಥಿತಿ ಎದುರಾಗಿದೆ. ನಾವು ರಿಲೀಸ್ ಡೇಟ್ ಹೇಳಿರಲಿಲ್ಲ. ಆದರೆ, ರಿಲೀಸ್ ಮಾಡೋಕೆ ರೆಡಿ ಇದ್ದೆವು. ಮಾರ್ಚ್ ಕೊನೆ ವಾರ ಅಥವಾ ಏಪ್ರಿಲ್ ಮೊದಲ ವಾರ ಬರೋಣ ಎನ್ನುವ ಪ್ಲಾನ್‍ನಲ್ಲಿದ್ದೆವು. ಈಗ ಎಲ್ಲವೂ ಚೇಂಜ್ ಆಗಿದೆ. ಸದ್ಯಕ್ಕಂತೂ ರಿಲೀಸ್ ಬಗ್ಗೆ ಯಾವುದೇ ನಿರ್ಧಾರ ಇಲ್ಲ ಎಂದಿದ್ದಾರೆ ನಿರ್ಮಾಪಕ ಕೆ.ಪಿ.ಶ್ರೀಕಾಂತ್.

ಮನುರಂಜನ್ ರವಿಚಂದ್ರನ್ ಆಭಿನಯದ ಪ್ರಾರಂಭ ಚಿತ್ರದ ರಿಲೀಸ್‍ಗೂ ಬ್ರೇಕ್ ಬಿದ್ದಿದೆ. ಮಾರ್ಚ್ 27ಕ್ಕೆ ಪ್ರಾರಂಭ ರಿಲೀಸ್ ಆಗಬೇಕಿತ್ತು. ಪ್ರಜ್ವಲ್ ದೇವರಾಜ್ ಅಭಿನಯದ ಅರ್ಜುನ್ ಗೌಡ ಚಿತ್ರದ ರಿಲೀಸ್ ಡೇಟ್ ಕೂಡಾ ಹೆಚ್ಚೂ ಕಮ್ಮಿ ಆಗಿದೆ.