ಡೈಲಾಗ್ ಟೀಸರ್. 1.39 ನಿಮಿಷ. ಅಷ್ಟೂ ಹೊತ್ತು ಶಿಳ್ಳೆ.. ಚಪ್ಪಾಳೆ.. ಹೊಡೆಯಬೇಕು ಎನ್ನಿಸೋ ಡೈಲಾಗು.. ಇದು ಯುವರತ್ನ ಟೀಸರ್ ಸ್ಪೆಷಲ್. ಟೀಸರ್ ಶುರು ಮಾಡೋದು ಡಾಲಿ.
ಡೈಲಾಗ್ ನಂ.1 :
ಗಂಡಸ್ತನ.. ಛರ್ಬಿ.. ಮೀಟರು.. ಮಾರ್ಕೆಟ್ಟು.. ಎಲ್ಲ ಇರುವವನು ಬೇಕು.. ಸಿಗ್ತಾನಾ..
ಡೈಲಾಗ್ ನಂ. 2:
ಕಾಲೇಜಲ್ಲಿ ಹೊಡೆದಾಡಿ ಡಾನ್ ಆಗ್ಬೇಕು ಅಂದ್ಕೊಂಡಿದ್ದೀಯಾ..
ಸೀಟ್‍ಗಾಗಿ ಹೊಡೆದಾಡೋನು ಡಾನು.. ಅದರ ಮೇಲೆ ಕೂತ್ಕೊಳ್ಳೋನು.. (ಕಿಂಗ್ ಎಲೆ ಪ್ರತ್ಯಕ್ಷ)
ಡೈಲಾಗ್ ನಂ.3 :
ಹೀರೋಯಿನ್ : ನೀವು ನೋಡೋಕೆ ಅಣ್ಣಾವ್ರ ತರಾನೇ ಇದ್ದೀರ.
ಅಪ್ಪು : ಥ್ಯಾಂಕ್ಯೂ.. ಆದರೆ ನನ್ನನ್ನ ಅಣ್ಣ ಅಂದ್ಕೋಬೇಡಿ
ಡೈಲಾಗ್ ನಂ.4 :
ಖದರ್ ಇಲ್ಲದ ಕಡೆ ನಮ್ಮ ಹುಡುಗ್ರೇ ಇರಲ್ಲ, ಇನ್ನು ನಾನ್ ಇರ್ತೀನಾ..
ಡೈಲಾಗ್ ನಂ. 5 :
ಆರ್‍ಸಿಬಿ ಮ್ಯಾಚ್ ಗೆಲ್ಬೋದು, ಕಪ್ ಗೆಲ್ಲೋಕೆ ಆಗಲ್ಲ
ನಾವ್ ನಂಬಿಕೆ ಕಳೆದುಕೊಂಡಿಲ್ಲ. ಕಳೆದುಕೊಳ್ಳೋದೂ ಇಲ್ಲ. ಬ್ಯಾಟ್ ಬಾಲ್ ಇದೆ ಅಂತಾ ಫೀಲ್ಡಿಗಿಳಿದೋನಲ್ಲ ನಾನು, ಹೊಡೀತೀವಿ ಅನ್ನೋ ಕಾನ್ಫಿಡೆನ್ಸ್ ಇರೋದಿಕ್ಕೇ ಫೀಲ್ಡಿಗೆ ಇಳಿದಿರೋದು..
ಸಂತೋಷ್ ಆನಂದ ರಾಮ್ ಪೆನ್ನಿನಲ್ಲಿಯೇ ಪರಾಕ್ರಮ ಮೆರೆದಿದ್ದಾರೆ. ಅಪ್ಪು ಖದರ್ ಅಪ್ಪುವನ್ನೇ ನೆನಪಿಸಿದ್ರೆ, ನಾಯಕ ಸಯ್ಯೇಷಾ ಜೊತೆಗಿನ ಒಂದೇ ಒಂದು ತುಂಟತನದ ಡೈಲಾಗ್ ಮುಖದ ಮೇಲೆ ನಗು ಮೂಡಿಸುತ್ತೆ. ಹೊಂಬಾಳೆ ಪ್ರೊಡಕ್ಷನ್ಸ್‍ನಲ್ಲಿ ಪುನೀತ್ ಅವರಿಗೆ ಇದು 3ನೇ ಸಿನಿಮಾ. ರಾಜಕುಮಾರ ನಂತರ ಪ್ರೊಡ್ಯೂಸರ್, ಡೈರೆಕ್ಟರ್ ಮತ್ತು ಹೀರೋ ಮತ್ತೆ ಒಟ್ಟಿಗೇ ಸೇರಿರುವ ಚಿತ್ರ ಯುವರತ್ನ