Print 
shivarajkumar, sriimurali,

User Rating: 5 / 5

Star activeStar activeStar activeStar activeStar active
 
sriimurali feeds shivanna food by hand
Sriimurali, Shivarajkumar

ಶಿವಣ್ಣ, ಸಿಂಪಲ್ ಮನುಷ್ಯ. ಸ್ಟಾರ್ ಎನ್ನುವ ಹಮ್ಮು ಬಿಮ್ಮು ಇಲ್ಲವೇ ಇಲ್ಲ. ಇನ್ನು ಶ್ರೀಮುರಳಿ, ರೋರಿಂಗ್ ಸ್ಟಾರ್. ಇವರಿಬ್ಬರೂ ಚಿತ್ರರಂಗದಲ್ಲಿ ಕಲಾವಿದರಷ್ಟೇ ಅಲ್ಲ, ಸಂಬಂಧಿಗಳೂ ಹೌದು. ಆ ಪ್ರೀತಿ, ಬಾಂಧವ್ಯವನ್ನು ಇಂದಿಗೂ ಹಾಗೆಯೇ ಉಳಿಸಿಕೊಂಡು ಬಂದಿದ್ದಾರೆ ಎನ್ನುವುದಕ್ಕೆ ಒಂದು ವಿಡಿಯೋ ಸಾಕ್ಷಿಯಾಗಿದೆ.

ಶಿವರಾಜ್‌ಕುಮಾರ್ ಅವರಿಗೆ ಶ್ರೀಮುರಳಿ ಕೈ ತುತ್ತು ತಿನ್ನಿಸುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಇತ್ತೀಚೆಗೆ ಕುಟುಂಬದ ಕಾರ್ಯಕ್ರಮವೊಂದರಲ್ಲಿ ನಡೆದಿರುವ ಘಟನೆ ಇದು. ಶ್ರೀಮುರಳಿ ಊಟ ಮಾಡುವಾಗ ಶಿವಣ್ಣ ಬರುತ್ತಾರೆ. ಪಕ್ಕದಲ್ಲಿ ಕುಳಿತ ಮಾಮನಿಗೆ ಶ್ರೀಮುರಳಿ ಕೈ ತುತ್ತು ತಿನಿಸುತ್ತಾರೆ.

ಶಿವಣ್ಣ ಮತ್ತು ಶ್ರೀಮುರಳಿ ಒಟ್ಟಿಗೇ ಮಫ್ತಿ ಚಿತ್ರದಲ್ಲಿ ನಟಿಸಿದ್ದರು. ಆದರೆ ಚಿತ್ರರಂಗವನ್ನೂ ಮೀರಿದ ಬಾಂಧವ್ಯವೊಂದು ಅವರಿಬ್ಬರ ಮಧ್ಯೆ ಇದೆ.