ಇದು ಅಧಿಕೃತ. ಹೊಂಬಾಳೆ ಪ್ರೊಡಕ್ಷನ್ಸ್ ಅಧಿಕೃತವಾಗಿಯೇ ಚಿತ್ರದ ರಿಲೀಸ್ ಡೇಟ್ ಘೋಷಿಸಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್ ಚಾಪ್ಟರ್ 1 ಚಿತ್ರದ ಸೀಕ್ವೆಲ್ ಕೆಜಿಎಫ್ ಚಾಪ್ಟರ್ 2.
2018ರ ಡಿಸೆಂಬರ್ 21ರಂದು ರಿಲೀಸ್ ಆಗಿದ್ದ ಕೆಜಿಎಫ್ ಚಾಪ್ಟರ್, ಬಾಕ್ಸಾಫೀಸ್ನಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿತ್ತು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ.. ಐದಕ್ಕೆ ಐದೂ ಭಾಷೆಯಲ್ಲಿ ಹಿಟ್ ಆಗಿದ್ದ ಕೆಜಿಎಫ್, 250 ಕೋಟಿ ಬಿಸಿನೆಸ್ ಮಾಡಿತ್ತು. ಈಗಲೂ ಆನ್ಲೈನ್ ಸ್ಟ್ರೀಮಿಂಗ್ನಲ್ಲಿ ಟಾಪ್ ಲಿಸ್ಟಿನಲ್ಲಿರೋ ಕೆಜಿಎಫ್ ಚಾಪ್ಟರ್ 1ನಿಂದಾಗಿ, ಸಹಜವಾಗಿಯೇ ಚಾಪ್ಟರ್ 2 ಮೇಲೆ ನಿರೀಕ್ಷೆ ಇದೆ.
ಯಶ್ ಎದುರು ಈ ಬಾರಿ ಸಂಜಯ್ ದತ್, ರವೀನಾ ಟಂಡನ್ ಅವರಂತಹ ಬಾಲಿವುಡ್ ದಿಗ್ಗಜರೂ ನಟಿಸಿದ್ದು, ಹೊಂಬಾಳೆ ಪ್ರೊಡಕ್ಷನ್ಸ್ ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸುವ ನಿರೀಕ್ಷೆ ಇದೆ.