ರಾಕಿಂಗ್ ಸ್ಟಾರ್ ಯಶ್‍ಗೆ ಪ್ರಶಾಂತ್ ನೀಲ್ ಅದ್ಭುತ ಉಡುಗೊರೆ ಕೊಟ್ಟಿರೋದು ಇಡೀ ಇಂಡಿಯಾಗೇ ಗೊತ್ತು. ಕೆಜಿಎಫ್ ನಂತಹ ಮಾಸ್ಟರ್ ಪೀಸ್ ಕೊಟ್ಟ ಪ್ರಶಾಂತ್ ನೀಲ್, ಯಶ್‍ಗೆ ಪ್ಯಾನ್ ಇಂಡಿಯಾ ಸ್ಟಾರ್ ಇಮೇಜ್ ಕೊಟ್ಟಿದ್ದಾರೆ. ಅಂತಹ ಪ್ರಶಾಂತ್ ನೀಲ್ ಅವರಿಗೆ ಯಶ್ ಕೂಡಾ ಒಂದು ಪ್ರೀತಿಯ ಕಾಣಿಕೆ ಕೊಟ್ಟಿದ್ದಾರೆ.
ಸ್ಯಾಮ್ಸಂಗ್ ಗ್ಯಾಲಕ್ಸಿ ಎಎಕ್ಸ್‍ವೈ ಫೋಲ್ಡಿಂಗ್ ಮೊಬೈಲ್ ಗಿಫ್ಟ್ ನೀಡಿದ್ದಾರೆ ಯಶ್. ಅದನ್ನು ಅಷ್ಟೇ ಖುಷಿಯಿಂದ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ಪ್ರಶಾಂತ್ ನೀಲ್. ಅಷ್ಟೇ ಅಲ್ಲ, ಆ ಕ್ಯಾಮೆರಾ ಮೂಲಕವೇ ತಮ್ಮ ಪತ್ನಿ ಮತ್ತು ಶ್ರೀನಿಧಿ ಶೆಟ್ಟಿ ಜೊತೆಯಲ್ಲಿರೋ ಫೋಟೋವೊಂದನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟಿದ್ದಾರೆ ಪ್ರಶಾಂತ್. ಅಂದಹಾಗೆ ಪ್ರಶಾಂತ್ ನೀಲ್ ಪತ್ನಿ ಹೆಸರು ರೀನಾ.