ದುನಿಯಾ ಸೂರಿಯವರ ಡ್ರೀಮ್ ಪ್ರಾಜೆಕ್ಟ್ ಕಾಗೆ ಬಂಗಾರ. ಕೆಂಡ ಸಂಪಿಗೆ ಚಿತ್ರ ಇದ್ಯಲ್ಲ, ಅದರ ಪ್ರೀವರ್ಷನ್ ಅಂದರೆ ಹಿಂದಿನ ಭಾಗ ಕಾಗೆ ಬಂಗಾರ. ಇತ್ತೀಚೆಗೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದಲ್ಲೂ ಕಾಗೆ ಬಂಗಾರ ಟೇಕಾಫ್ ಆಗುವ ಸುಳಿವು ಕೊಟ್ಟಿದ್ದರು ದುನಿಯಾ ಸೂರಿ. ಆದರೆ, ಈಗ ಆ ಕಾಗೆ ಬಂಗಾರ ಸೂರಿಯವರ ಕೈ ತಪ್ಪಿತೇ ಎನ್ನುವ ಡೌಟ್ ಶುರುವಾಗಿದೆ.
ಕಾರಣ ಇಷ್ಟೆ, ದಿನೇಶ್ ಗೌಡ ಎನ್ನುವವರು ಕಾಗೆ ಬಂಗಾರ ಚಿತ್ರದ ಟೈಟಲ್ ರಿಜಿಸ್ಟರ್ ಮಾಡಿಸಿದ್ದಾರೆ. ಪೋಸ್ಟರ್ ಡಿಸೈನ್ ಮಾಡಿಸಿ ಸೋಷಿಯಲ್ ಮೀಡಿಯಾಗೂ ಕೊಟ್ಟಿದ್ದಾರೆ. ಹಾಗಾದರೆ.. ಸೂರಿಯವರ ಕಾಗೆ ಬಂಗಾರದ ಕಥೆ ಏನಾಯ್ತು..? ಸಸ್ಪೆನ್ಸ್ ಹಾಗೆಯೇ ಇದೆ.