` ಶಿವಾರ್ಜುನ'ನಿಗೊಬ್ಬ ಬಜಾರಿ ಹುಡುಗಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
shivarjuna heroine's role is more rugged
Shivarjuna Movie Image

ಶಿವಾರ್ಜುನ ಚಿತ್ರದ ಟ್ರೇಲರ್ ನೋಡಿದವರಿಗೆ ಇದೊಂದು ಆ್ಯಕ್ಷನ್ ಥ್ರಿಲ್ಲರ್ ಎನ್ನುವುದು ಗೊತ್ತಾಗಿರುತ್ತೆ. ಆದರೆ ಈ ಚಿತ್ರದ ನಾಯಕಿ ಇದ್ದಾಳಲ್ಲ.. ಆಕೆಯ ಕ್ಯಾರೆಕ್ಟರ್ ಹೀರೋ ಪಾತ್ರಕ್ಕಿಂತ ರಗಡ್ ಆಗಿದೆಯಂತೆ.

ನಾನೊಬ್ಬಳು ಬಜಾರಿ. ಹಳ್ಳಿ ಹುಡುಗಿ. ಲಂಗ ದಾಣಿ ಹಾಕ್ಕೊಂಡು ಬೀಡಿ ಸೇದ್ಕೊಂಡು ಓಡಾಡುವ ಪಾತ್ರ.

ಯಾರೇನೇ ಹೇಳಿದ್ರೂ ಡೋಂಟ್ ಕೇರ್ ಅನ್ನೋ ಸ್ವಭಾವ ನನ್ನದು. ಆಡಿಯನ್ಸ್‍ಗೆ ಸಖತ್ ಮಜಾ ಕೊಡುತ್ತೆ ಅನ್ನೋ ಕಾನ್ಫಿಡೆನ್ಸ್ ಕೊಡ್ತಾರೆ ನಾಯಕಿ ಅಮೃತಾ.

ಚಿರಂಜೀವಿ ಸರ್ಜಾ ಹೀರೋ ಆಗಿರುವ ಚಿತ್ರದಲ್ಲಿ ಅವರಿಗೂ ಎರಡು ಕ್ಯಾರೆಕ್ಟರ್ ಇದೆಯಂತೆ. ಶಿವನೇ ಬೇರೆ.. ಅರ್ಜುನನೇ ಬೇರೆ.. ಇನ್ನು ಚಿತ್ರದ ಡೈರೆಕ್ಟರ್ ಶಿವತೇಜಸ್. ಚಿತ್ರದ ನಿರ್ಮಾಪಕರ ಹೆಸರೂ ಶಿವಾರ್ಜುನ್. ಒಟ್ಟಿನಲ್ಲಿ ಶಿವಾರ್ಜುನ ಚಿತ್ರದಲ್ಲಿ ಶಿವತಾಂಡವ..

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery