ಅಪ್ಪು, ಪುನೀತ್ ರಾಜ್ಕುಮಾರ್ ಹೀರೋ ಆಗಿ ನಟಿಸಿದ ಪ್ರಥಮ ಚಿತ್ರ. ಪುರಿ ಜಗನ್ನಾಥ್ ನಿರ್ದೇಶನದ ಅಪ್ಪು ಬ್ಲಾಕ್ ಬಸ್ಟರ್ ಹಿಟ್. ಡೋಂಟ್ ಕೇರ್.. ಡೇರ್ ಡೆವಿಲ್ ಸ್ಟೂಡೆಂಟ್ ಆಗಿ ಮಿಂಚಿದ್ದರು ಪುನೀತ್ ರಾಜ್ಕುಮಾರ್. ಪವರ್ ಸ್ಟಾರ್ ಅನ್ನೋ ಬಿರುದಿಗೆ ತಕ್ಕಂತೆ ಪವರ್ ಫುಲ್ಲಾಗಿ ಬಂದಿತ್ತು ಅಪ್ಪು ಕ್ಯಾರೆಕ್ಟರ್. ಈಗ 18 ವರ್ಷಗಳ ನಂತರ ಅಂತಹುದೇ ಅಪ್ಪು ಬರುತ್ತಿದ್ದಾರೆ. ಯುವರತ್ನ ಚಿತ್ರದಲ್ಲಿ.
ಅಂಥಾದ್ದೊಂದು ಹಿಂಟ್ ಕೊಟ್ಟಿದ್ದಾರೆ ಹೊಂಬಾಳೆ ಫಿಲಂಸ್ನ ನಿರ್ಮಾಪಕ ಕಾರ್ತಿಕ್ ಗೌಡ. ಸಂತೋಷ್ ಆನಂದ್ ರಾಮ್, ಪುನೀತ್ ರಾಜ್ಕುಮಾರ್,
ವಿಜಯ್ ಕಿರಗಂದೂರು ರಾಜಕುಮಾರ ನಂತರ ಜೊತೆಯಾಗಿರುವ ಸಿನಿಮಾ ಯುವರತ್ನ. ಅಪ್ಪು ಹುಟ್ಟುಹಬ್ಬಕ್ಕೆ ಟೀಸರ್ ಗಿಫ್ಟ್ ಗ್ಯಾರಂಟಿ ಅನ್ನೋ ಭರವಸೆ ಸಿಕ್ಕಿದೆ. ಸ್ಸೋ.. ಮಾರ್ಚ್ 17. ಯುವರತ್ನ ಅಪ್ಡೇಟ್.