ಚಿತ್ರನಟ ರಮೇಶ್ ಭಟ್ ಅವರ ಕಾರು ಅಪಘಾತಕ್ಕೀಡಾಗಿದೆ. ದೇವರ ದಯೆ.. ರಮೇಶ್ ಭಟ್ ಪಾರಾಗಿದ್ದಾರೆ. ಅಪಘಾತ ಆಗಿರುವುದು ಈಗಲ್ಲ, ಮಾರ್ಚ್ 4ನೇ ತಾರೀಕು.
ಅನು ಪ್ರಭಾಕರ್ ನಾಯಕಿಯಾಗಿ ನಟಿಸುತ್ತಿರುವ ಸಾರಾ ವಜ್ರ ಚಿತ್ರದ ಶೂಟಿಂಗ್‍ಗಾಗಿ ಮಂಗಳೂರಿಗೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ವಾಪಸ್ ಬರುವಾಗ ಉಳ್ಳಾಲದ ಸಮೀಪ ಅಪಘಾತ ಸಂಭವಿಸಿದೆ. ಅಂದಹಾಗೆ ಡ್ರೈವಿಂಗ್ ಸೀಟ್‍ನಲ್ಲಿ ರಮೇಶ್ ಭಟ್ ಇರಲಿಲ್ಲ.
ಆ ದಿನ ಮಳೆ ಬಂತು. ರಾತ್ರಿ ವೇಳೆ. ರಸ್ತೆ ಸರಿಯಾಗಿ ಕಾಣುತ್ತಿರಲಿಲ್ಲ. ಕಾರು ಡಿವೈಡರ್‍ಗೆ ಗುದ್ದಿತು. ಅದೇ ಜಾಗದಲ್ಲಿ ಹಲವು ಅಪಘಾತಗಳು ಸಂಭವಿಸಿವೆಯಂತೆ. ಕಾರಣವೇನೋ ಗೊತ್ತಿಲ್ಲ. ಡ್ರೈವರ್‍ಗೂ ಸಣ್ಣ ಪುಟ್ಟ ಗಾಯಗಳಾಗಿದ್ದವು. ನನಗೆ ಮೂಗು ಮತ್ತು ಮುಖಕ್ಕೆ ಪೆಟ್ಟು ಬಿದ್ದಿತ್ತು. ಬೆಂಗಳೂರಿಗೆ ಬಂದ ಮೇಲೆ ಟ್ರೀಟ್‍ಮೆಂಟ್ ತೆಗೆದುಕೊಂಡೆ ಎಂದು ಹೇಳಿಕೊಂಡಿದ್ದಾರೆ ರಮೇಶ್ ಭಟ್.
ರಮೇಶ್ ಭಟ್ ಬೇಗ ಗುಣಮುಖರಾಗಲಿ ಎಂದು ಚಿತ್ರಲೋಕ ಹಾರೈಸುತ್ತದೆ.