ಧ್ರುವ ಸರ್ಜಾ ಅಭಿಮಾನಿಗಳ 2 ವರ್ಷದ ವೇಯ್ಟಿಂಗ್ ಏಪ್ರಿಲ್‍ನಲ್ಲಿ ಅಂತ್ಯವಾಗೋ ನಿರೀಕ್ಷೆ ಇದೆ. ಏಪ್ರಿಲ್ ಅಂದ್ರೆ ಗೊತ್ತಲ್ಲ.. ಅಣ್ಣಾವ್ರ ಹುಟ್ಟುಹಬ್ಬದ ತಿಂಗಳು. ರಾಜೋತ್ಸವದಂದೇ ಪೊಗರು ರಿಲೀಸ್ ಆಗಲಿದೆ ಎನ್ನುವ ಸುದ್ದಿ ಇದೆ.
ದರ್ಶನ್ ಚಿತ್ರ ಬಂದ ನಂತರ ಬರುತ್ತೇನೆ ಎಂದಿದ್ದರು ಧ್ರುವ ಸರ್ಜಾ. ಏಪ್ರಿಲ್ 9ಕ್ಕೆ ರಾಬರ್ಟ್ ರಿಲೀಸ್ ಆದರೆ, ಅದಾದ ಎರಡು ವಾರಗಳ ನಂತರ ಪೊಗರು ರಿಲೀಸ್ ಆಗಲಿದೆ. ಅಲ್ಲಿಗೆ ಎರಡು ವಾರಗಳ ಗ್ಯಾಪ್.
ನಂದ ಕಿಶೋರ್ ನಿರ್ದೇಶನದ ಪೊಗರು ಚಿತ್ರ ಎರಡು ವರ್ಷಗಳಿಂದ ಪ್ರೊಡಕ್ಷನ್ ಹಂತದಲ್ಲಿದೆ. ಪೊಗರುನಲ್ಲಿ ಧ್ರುವ ಸರ್ಜಾ ರಗಡ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಮಂದಣ್ಣ ಧ್ರುವಾಗೆ ನಾಯಕಿ.