ಕೆಮ್ ಬಂದ್ರೆ ಕೆಮ್ಬೇಕು.. ಕೋಲ್ಡ್ ಆದ್ರೆ ಸೀನ್ಬೇಕು..
ಅದು ಬೇಕು.. ಇದು ಬೇಕು.. ಇಷ್ಟೇನೇ ಈ ಬದುಕು..
ಹಂಗಾದ್ರೆ ಬದುಕೋಕೆ ಏನ್ ಬೇಕು..
ಒಂದ್ ತಟ್ಟೆ.. ಒಂದ್ ಚೊಂಬು..
ಒಂದ್ ಚಾಪೆ.. ಒಂದ್ ದಿಂಬು..
ಒಂದ್ ಮುದ್ದೆ.. ಒಂದ್ ನಿದ್ದೆ..
ಒಂದ್ ಗೂಡು.. ಒಂದ್ ಹಾಡು..
ಇಷ್ಟೆಲ್ಲ ವೇದಾಂತದ ಸಾಹಿತ್ಯ ಬರೆದಿರುವುದು ನಾಗೇಂದ್ರ ಪ್ರಸಾದ್. ಹಾಡಿಗೆ ಭರ್ಜರಿ ಮ್ಯೂಸಿಕ್ ಕೊಟ್ಟಿರೋದು ಸಾಧು ಕೋಕಿಲ ಪುತ್ರ ಸುರಾಗ್ ಕೋಕಿಲ. ಶಿವತೇಜಸ್ ನಿರ್ದೇಶನದ ಶಿವಾರ್ಜುನ ಚಿತ್ರದ ಹಾಡಿದು. ಹಕುನಾ ಮಟಾಟಾ ಸಾಂಗ್ ಎಂದೇ ಫೇಮಸ್ ಆಗಿರೋ ಹಾಡು ಸಿಕ್ಕಾಪಟ್ಟೆ ಹಿಟ್ಟು.
ಚಿರಂಜೀವಿ ಸರ್ಜಾ, ಅಮೃತಾ ಅಯ್ಯಂಗಾರ್, ಸಾಧುಕೋಕಿಲ, ತಾರಾ, ಕಿಶೋರ್ ನಟಿಸಿರುವ ಚಿತ್ರ ಮಾರ್ಚ್ ತಿಂಗಳಲ್ಲಿಯೇ ರಿಲೀಸ್ ಆಗುತ್ತಿದೆ. ಎಂ.ಬಿ.ಮಂಜುಳಾ ನಿರ್ಮಾಣದ ಶಿವಾರ್ಜುನ ಚಿತ್ರ, ಚೆಂದದ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದೆ.