ಜಗತ್ತಿನಾದ್ಯಂತ ಕೊರೋನಾ ವಿಷಕಾರಿಯಾಗಿ ಹಬ್ಬುತ್ತಿದೆ. ಚೀನಾವೊಂದರಲ್ಲೇ 2 ಸಾವಿರಕ್ಕೂ ಹೆಚ್ಚು ಬಲಿ ಪಡೆದಿದೆ. ಲಕ್ಷಾಂತರ ಜನ ಕೊರೋನಾದಿಂದ ನರಳುತ್ತಿದ್ದಾರೆ. ಈಗ ಇದೇ ರೋಗ ಇಟಲಿ, ಫ್ರಾನ್ಸ್, ಸ್ಪೇನ್ ಸೇರಿದಂತೆ ಹಲವು ದೇಶಗಳನ್ನು ಕಾಡುತ್ತಿದೆ. ಇದರ ಎಫೆಕ್ಟ್ ಕನ್ನಡ ಚಿತ್ರರಂಗವನ್ನೂ ಬಿಟ್ಟಿಲ್ಲ. ಕೊರೋನಾ ಎಫೆಕ್ಟ್ಗೆ ಶೂಟಿಂಗ್ನ್ನೇ ಕ್ಯಾನ್ಸಲ್ ಮಾಡಬೇಕಾಗಿ ಬಂದಿದೆ ರಾಬರ್ಟ್ ಟೀಂ.
ಪ್ಲಾನ್ ಪ್ರಕಾರ ರಾಬರ್ಟ್ ಟೀಂ ಸ್ಪೇನ್ನಲ್ಲಿ ಶೂಟಿಂಗ್ ಮಾಡಬೇಕಿತ್ತು. ಶೂಟಿಂಗ್ಗೆ ಪ್ಲಾನ್ ಮಾಡಿ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್.ರಾಜ್ ಲೊಕೇಷನ್ ನೋಡಿಕೊಂಡೂ ಬಂದಿದ್ದರಂತೆ. ಇನ್ನೇನು ಶೂಟಿಂಗ್ಗೆ ಹೊರಡಬೇಕು ಎನ್ನುವಾಗ ಈ ಕೊರೋನಾ ವಕ್ಕರಿಸಿದೆ.
ಕೊರೋನಾ ಭೀತಿ ಗೊತ್ತಾದ ತಕ್ಷಣ ದರ್ಶನ್ ಟೆಕ್ನಿಷಿಯನ್ಸ್ಗಳ ಲೈಫ್ನ್ನು ರಿಸ್ಕ್ಗೆ ದೂಡುವುದು ಬೇಡ. ಏನಾದರೂ ಆದರೆ ಕಷ್ಟ ಎಂದರಂತೆ. ನಿರ್ದೇಶಕ ತರುಣ್ ಸುಧೀರ್ ಮತ್ತು ನಿರ್ಮಾಪಕ ಉಮಾಪತಿ ಅವರಿಗೂ ಅದೇ ಸರಿ ಎನ್ನಿಸಿ, ಶೂಟಿಂಗ್ ಕ್ಯಾನ್ಸಲ್ ಮಾಡಿದ್ದಾರೆ.
ಈಗ ನಿರ್ದೇಶಕ ತರುಣ್ ಸುಧೀರ್ ಹಾಡಿನ ಚಿತ್ರೀಕರಣಕ್ಕೆ ಹೊಸ ಜಾಗದ ಹುಡುಕಾಟದಲ್ಲಿದ್ದಾರೆ.