` 29 ದಿನ.. 34 ಸಿನಿಮಾ.. - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
29 days, 34 plus movies overflowing releases this month
34 Movies Releases this month

ಫೆಬ್ರವರಿಯಲ್ಲಿ ಸಾಮಾನ್ಯವಾಗಿ ಬರೋದೇ 28 ದಿನ. ಈ ಬಾರಿ ಅಧಿಕ ವರ್ಷವಾದ್ದರಿಂದ 29 ದಿನ ಬಂದಿದೆ. ಈ 29 ದಿನದಲ್ಲಿ ಕನ್ನಡ ಚಿತ್ರರಂಗ ಮಾಡಿರುವುದು ಕಂಡು ಕೇಳರಿಯದ.. ನೋಡಿರದ.. ದಾಖಲೆ. ಹೌದು.. ಈ 29 ದಿನಕ್ಕೆ ಕನ್ನಡ ಇಂಡಸ್ಟ್ರಿ ರಿಲೀಸ್ ಮಾಡಿರುವ ಚಿತ್ರಗಳ ಸಂಖ್ಯೆ 34. ದಿನಕ್ಕೆ ಒಂದು ಸಿನಿಮಾ ಎಂದುಕೊಂಡರೂ ಅದಕ್ಕಿಂತ ಹೆಚ್ಚು. ತುಳು, ಕೊಂಕಣಿ ಚಿತ್ರಗಳೂ ಸೇರಿದರೆ ಇನ್ನೂ ಹೆಚ್ಚು.

ಮೊದಲ ವಾರ 9 ಸಿನಿಮಾ ರಿಲೀಸ್ ಆದರೆ, 2ನೇ ವಾರ 8 ಚಿತ್ರ ಥಿಯೇಟರಿಗೆ ಬಂದವು. 3ನೇ ವಾರ 6 ಸಿನಿಮಾಗಳು ಬಂದರೆ, ಈ ವಾರ ಅಂದ್ರೆ 4ನೇ ವಾರ ಮತ್ತೆ 6 ಸಿನಿಮಾಗಳಿವೆ.  ಇಷ್ಟು ಸಿನಿಮಾ ಬಂದರೆ ಪ್ರೇಕ್ಷಕ ಯಾವ ಸಿನಿಮಾ ನೋಡ್ತಾನೆ.. ಅತಿವೃಷ್ಟಿಯೂ ಅಪಾಯಕಾರಿ.. ಹಿಂಗಾದ್ರೆ ಕನ್ನಡ ಚಿತ್ರರಂಗ ಉದ್ಧಾರ ಎನ್ನುವ ಮಾತುಗಳೂ ಕೇಳಿ ಬಂದವು. ಇಷ್ಟೆಲ್ಲದರ ನಡುವೆಯೂ ಈ ತಿಂಗಳಲ್ಲಿ ರಿಲೀಸ್ ಆದ ಚಿತ್ರಗಳಲ್ಲಿ ಕೆಲವು ಚಿತ್ರಗಳು ಗಮನ ಸೆಳೆದವು.

ಗುರು ದೇಶಪಾಂಡೆಯವರ ಜಂಟಲ್‍ಮನ್, ಸಾಗುತ ದೂರಾ ದೂರಾ, ಶಿವಾಜಿ ಸುರತ್ಕಲ್, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರಗಳು ಸದ್ದು ಮಾಡಿದವು. ದಿಯಾ ಹಾಗೂ ಲವ್ ಮಾಕ್ಟೇಲ್ ಚಿತ್ರಗಳು ಬೇರೆಯದೇ ವರ್ಗದ ಪ್ರೇಕ್ಷಕರನ್ನು ಆಕರ್ಷಿಸಿದವು.

ಈ ವಾರವೂ ಅಷ್ಟೆ.. ಬಿಚ್ಚುಗತ್ತಿ ಭಾರೀ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಐತಿಹಾಸಿಕ ಚಿತ್ರವೊಂದು ತೆರೆಯ ಮೇಲೆ ಬಂದು ಯಾವ ಕಾಲವಾಗಿತ್ತೋ.. ಈಗ ಕನ್ನಡದ ಗಂಡುಗಲಿಯ ಕಥೆಯೊಂದು ಸಿನಿಮಾ ರೂಪಕ್ಕೆ ಬಂದು ರಿಲೀಸ್ ಆಗುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery